ಡ್ರ್ಯಾಗನ್ ‘ಬಾಲಕ್ಕೆ’ ಮತ್ತೆ ಬೆಂಕಿ: ಇನ್ನಷ್ಟು App ಬ್ಯಾನ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಚೀನಾ ಲಿಂಕ್ ಹೊಂದಿರುವ 200ಕ್ಕೂ ಅಧಿಕ ಆ್ಯಪ್‌ಗಳನ್ನು (Apps) ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 138 ಬೆಟ್ಟಿಂಗ್ ಅಪ್ಲಿಕೇಶನ್‌ಗಳು, 94 ಸಾಲದ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಮತ್ತು ನಿರ್ಬಂಧಿಸಲು ಕೇಂದ್ರ ಸಜ್ಜಾಗಿದೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (Union Ministry of Home Affairs) ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ (Ministry of Electronics and Information Technology) (MeitY) ಅಧಿಕೃತ ಮಾಹಿತಿ ನೀಡಿದ್ದು, 138 ಬೆಟ್ಟಿಂಗ್ ಅಪ್ಲಿಕೇಶನ್‌ಗಳು (Betting Apps) ಮತ್ತು 94 ಚೀನೀ ಸಂಪರ್ಕಗಳೊಂದಿಗೆ (China Link) ಸಾಲ ನೀಡುವ ಅಪ್ಲಿಕೇಶನ್‌ಗಳನ್ನು (Loan Apps) ತುರ್ತು ಹಾಗೂ ‘ಎಮರ್ಜೆನ್ಸಿ ಆಧಾರದ ಮೇಲೆ ನಿಷೇಧಿಸಲಾಗುವುದು ಮತ್ತು ನಿರ್ಬಂಧಿಸಲಾಗುವುದು ಎಂದು ಹೇಳಿದೆ.

ಈ ಆ್ಯಪ್‌ಗಳು ವ್ಯಕ್ತಿಗಳನ್ನು ದೊಡ್ಡ ಮಟ್ಟದ ಸಾಲದಲ್ಲಿ ಸಿಲುಕಿಸಲು ಅಪಾಯಕಾರಿ ನಡವಳಿಕೆಯನ್ನು ಪ್ರದರ್ಶಿಸುತ್ತವೆ. ಭಾರತೀಯ ನಾಗರಿಕರ ಡೇಟಾಗೆ ಭದ್ರತಾ ಅಪಾಯ (Security Threat) ಉಂಟು ಮಾಡುವುದರ ಜೊತೆಗೆ ಬೇಹುಗಾರಿಕೆ ಮತ್ತು ಪ್ರಚಾರಕ್ಕಾಗಿ ಸಾಧನಗಳಾಗಿ ದುರುಪಯೋಗಪಡಿಸಿಕೊಳ್ಳಬಹುದು ಎಂದೂ ಹೇಳಲಾಗಿದೆ.

2022 ರಲ್ಲಿ, ರಾಷ್ಟ್ರದ ಭದ್ರತೆಗೆ ಅಪಾಯವನ್ನುಂಟುಮಾಡುವ 54 ಚೀನೀ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಇದಕ್ಕೂ ಮುನ್ನ 2020 ರಿಂದ 270 ಅಪ್ಲಿಕೇಶನ್‌ಗಳನ್ನು ಸರ್ಕಾರವು ನಿಷೇಧಿಸಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!