ಯುವಕರಿಗೆ ಕ್ರೀಡೆಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರದಿಂದ ಸಿಗಲಿದೆ ಸದಾ ಪ್ರೋತ್ಸಾಹ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌   

ಕ್ರೀಡೆಯಲ್ಲಿ ಯುವಕರಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರ ಸದಾ ಪ್ರೋತ್ಸಾಹ ನೀಡಲಿದೆ ಎಂದು ಪ್ರಧಾನಿ ಮೋದಿ(PM Modi) ಅವರು ಹೇಳಿದ್ದಾರೆ.

ಜೈಪುರ ಮಾಹಾಖೇಲ್(Mahakhel jaipur) ಕ್ರೀಡಾಕೂಟದ​ ಉದ್ಘಾಟನೆಯ ಸಂದರ್ಭ ಮೋದಿ ಮಾತನಾಡಿ, ಕ್ರೀಡಾ ಕೂಟದಿಂದ ಹಲವು ಗ್ರಾಮಿಣಾ ಕ್ರೀಡಾಪಟುಗಳು ಬೆಳಕಿಗೆ ಬರಲಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಲು ಸಜ್ಜಾಗಿದ್ದಾರೆ ಎಂದು ಅವರು ತಿಳಿಸಿದರು.

ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ ಈ ರೀತಿಯ ಕ್ರೀಡಾಕೂಟ ಏರ್ಪಡಿಸಿದ್ದು ನಿಜಕ್ಕೂ ಸಂತಸದ ವಿಚಾರ. ರಾಜಸ್ಥಾನವು ಹೊಸ ಬಗ್ಗೆಯ ಪ್ರಯತ್ನಗಳೊಂದಿಗೆ ಯುವಕರಿಗೆ ಪ್ರೋತ್ಸಾಹ ನೀಡುವ ವಿಚಾರದಲ್ಲಿ ಸದಾ ಮುಂದಿರುತ್ತದೆ. ಈ ಕ್ರೀಡಾಕೂಟದಲ್ಲಿ ಸುಮಾರು 6 ಸಾವಿರಕ್ಕಿಂತಲೂ ಅಧಿಕ ಕ್ರೀಡಾಪಟುಗಳು ಪಾಳ್ಗೊಳ್ಳುತ್ತಿದ್ದಾರೆ. ಇದು ಸಣ್ಣ ವಿಚಾರವಲ್ಲ. ಕಳೆದ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದ​ ಬಳಿಕ ದೇಶದಲ್ಲಿ ಹೆಚ್ಚಿನ ಯುವಕರು ಕ್ರೀಡಾ ಕ್ಷೇತ್ರದತ್ತ ಮುಖಮಾಡಿದ್ದಾರೆ. ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!