ಹೊಸದಿಗಂತ ಡಿಜಿಟಲ್ ಡೆಸ್ಕ್:
Weekend With Ramesh ಹೆಸರು ನೀವು ಕೇಳಿ ಇರುತ್ತೀರಾ. ರಾಜ್ಯದ ಜನ ಮನಗೆದ್ದಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ.
ಇಲ್ಲಿ ಸಾಧಕರನ್ನು ಕರೆತಂದು ಅವರ ಜೀವನ ಏಳು ಬೀಳು ಗಳನ್ನು ನಿಮ್ಮ ಮುಂದೆ ಇಡಲಾಗುತ್ತದೆ. ಇದೀಗ ಮತ್ತೆ ʼವೀಕೆಂಡ್ ವಿತ್ ರಮೇಶ್ʼ ಸೀಸನ್ 5 ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ.
ಕನ್ನಡ ಕಿರುತೆರೆ ಲೋಕದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿಕೊಂಡ ʼವೀಕೆಂಡ್ ವಿತ್ ರಮೇಶ್ʼ ನಾಲ್ಕು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಮತ್ತೇ ಕಿರುತೆರೆ ಲೋಕದಲ್ಲಿ ಸಾಧಕರನ್ನು ಪರಿಚಯಿಸಾಲು ನಟ ರಮೇಶ್ ಅರವಿಂದ್ ನಿಮ್ಮ ಮುಂದೆ ಬರಲಿದ್ದಾರೆ.
ಈ ಕುರಿತು ಈಗಾಗಲೇ ಪ್ರಮೋ ಬಿಡುಗಡೆ ಮಾಡಲಾಗಿದ್ದು, ಮೊದಲು ಸಾಧಕರ ಖುರ್ಚಿಯ ಮೇಲೆ ಯಾರು ಇರುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಪ್ರಸುತ್ತ ಕಾಂತಾರ ಯಶಸ್ಸಿನಿಂದ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ರಿಷಬ್ ಶೆಟ್ಟಿ ಹೆಸರು ಮುಂಚುಣಿಯಲ್ಲಿದೆ. ಅಲ್ಲದೆ, ಡಾಲಿ ಧನಂಜಯ್, ಹೆಸರು ಸಹ ಕೇಳಿ ಬರುತ್ತಿವೆ.
ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮ ಪ್ರೋಮೋದಲ್ಲಿ ರಮೇಶ್ ವರ ಜೊತೆ ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ ಕೂಡ ಕಾಣಿಸಿಕೊಂಡಿದ್ದಾರೆ. ಪ್ಯಾರೀಸ್ ಟವರ್, ಕಾಶ್ಮೀರ ಚಳಿ, ಊಟಿ ಕೊಡೇಕೆನಲ್‌ಗಾದ್ರೂ ಕರ್ಕೊಂಡು ಹೋಗಿ ಎನ್ನುವ ರಾಧಿಕಾ ಪ್ರಶ್ನೆಗಳಿಗೆ ರಮೇಶ್ ಸ್ಮೈಲ್ ಮಾಡಿ ಟೀ ಕಪ್‌ನಿಂದ ಚೀಯರ್ಸ್ ಹೇಳುವ ಮೂಲಕ ವೀಕೆಂಡ್ ವಿತ್ ರಮೇಶ್ ಮರಳಿ ಬರಲಿದೆ ಎನ್ನುವ ಗುಟ್ಟು ರಟ್ಟು ಮಾಡಿದ್ದಾರೆ.
ಆದ್ರೆ ದಿನಾಂಕ ಮತ್ತು ಸಮಯದ ಕುರಿತು ಇನ್ನು ಮಾಹಿತಿ ನೀಡಿಲ್ಲ.