ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ಮತ್ತೆ ತ್ಯಾಜ್ಯ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇತ್ತೀಚೆಗೆ ಕಾಣಿಸಿಕೊಂಡ ಬೆಂಕಿಯಿಂದ ಈಗಷ್ಟೇ ಸಹಜ ಸ್ಥಿತಿಗೆ ಜನತೆ ಮರಳಿದ್ದರು. ಇದೀಗ ಮತ್ತೆ ತ್ಯಾಜ್ಯ ರಾಶಿಯಲ್ಲಿ ಬೆಂಕಿ ಕಾಣಿಸಿಕೊಂಡು ಆಕಾಶದೆತ್ತರಕ್ಕೆ ಹೊಗೆ ಏಳಲಾರಂಭಿಸಿದೆ.
ಸ್ಥಳದಲ್ಲಿ 3-4 ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ. ಅಲ್ಲದೆ ಜೆಸಿಬಿ ಮೂಲಕವೂ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.