ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಐದು ಕುಟುಂಬಗಳನ್ನು ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಇಲ್ಲಿ ಹೆದ್ದಾರಿಯೊಂದರ ವಿಸ್ತರಣೆ ಕಾಮಗಾರಿಯ ನಂತರಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ .
ಠಾಣಾಧಿಕಾರಿ(ಎಸ್ಎಚ್ಒ) ಮತ್ತು ತಹಸೀಲ್ದಾರ್, ಐದು ಕುಟುಂಬಗಳನ್ನು ಶಾಲೆಗೆ ಸ್ಥಳಾಂತರಿಸಿದ್ದಾರೆ. ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದ ಈ ಪ್ರದೇಶದ 20 ರಿಂದ 25 ಮನೆಗಳು ಅಸುರಕ್ಷಿತವಾಗಿವೆ ಎಂದು ನಿವಾಸಿಗಳು ಬೇಸರ ತೋಡಿಕೊಂಡಿದ್ದಾರೆ.