HEALTH | ಸನ್ ಸ್ಕ್ರೀನ್ ಬಳಕೆ ಅಂದಕ್ಕಲ್ಲ, ಆರೋಗ್ಯಕ್ಕೆ! ತಪ್ಪದೇ ಬಳಸಿ ಕ್ಯಾನ್ಸರ್ ನಿಂದ ರಕ್ಷಿಸಿಕೊಳ್ಳಿ..

ಸನ್‌ಸ್ಕ್ರೀನ್ ಇಂದಿಗೂ ಎಷ್ಟೊ ಮಂದಿ ಬಳಕೆ ಮಾಡೋದಿಲ್ಲ, ಸೂರ್ಯನ ಹಾನಿಕಾರಕ ಕಿರಣಗಳಿಂದ ತಪ್ಪಿಸಿಕೊಳ್ಳೋದಕ್ಕೆ ಸನ್‌ಸ್ಕ್ರೀನ್ ಅತ್ಯಾವಶ್ಯಕ. ಸೂರ್ಯನ ಹಾನಿಕಾರಕ ಕಿರಣಗಳಿಂದ ಉಂಟಾಗುವ ಚರ್ಮದ ಕ್ಯಾನ್ಸರ್‌ನಿಂದ ತಪ್ಪಿಸಿಕೊಳ್ಳುವ ಸುಲಭ ವಿಧಾನವಿದು.. ಸನ್‌ಸ್ಕ್ರೀನ್ ಬಳಕೆ ಹೇಗೆ? ಲಾಭ ಹೇಗೆ? ಇಲ್ಲಿದೆ ಮಾಹಿತಿ..

  • ಮಾರುಕಟ್ಟೆಯಲ್ಲಿ ಸಿಗುವ ಎಸ್‌ಪಿಎಫ್ ೪೦+ನ ಯಾವುದೇ ಸನ್‌ಸ್ಕ್ರೀನ್ ಪಡೆಯಿರಿ.
  • ಬೆಳಗ್ಗೆ ಸೂರ್ಯ ಹುಟ್ಟಿ ಒಂದು ಗಂಟೆಯ ಆಸು ಪಾಸಿನಲ್ಲಿ ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚಿ.
  • ಮುಖ ಎಂದರೆ ಬರೀ ಮುಖಕ್ಕಲ್ಲ ಕುತ್ತಿಗೆ ಕಿವಿಯನ್ನು ಪರಿಗಣಿಸಿ.
  • ನೀವು ಬೇರೆ ಕ್ರೀಂಗಳ ರೀತಿ ಒಂದು ಪುಟ್ಟದಾದ ಬಿಂದು ಹಚ್ಚಿದರೆ ಸಾಕು ಎಂದುಕೊಳ್ಳಬೇಡಿ, ನಿಮ್ಮ ಮೂರು ಬೆರಳುಗಳ ತುಂಬಾ ಸನ್‌ಸ್ಕ್ರೀನ್ ತೆಗೆದುಕೊಂಡು, ಎರಡು ಬೆರಳು ಮುಖಕ್ಕೆ ಹಾಗೂ ಒಂದು ಬೆರಳಿನ ಕ್ರೀಂ ಕುತ್ತಿಗೆ ಭಾಗಕ್ಕೆ ಹಚ್ಚಿ.
  • ಬಿಸಿಲೇ ಇಲ್ಲ, ಮಳೆಗಾಲದ ದಿನ, ನಾನು ಹೊರಗೆ ಹೋಗೋದಿಲ್ಲ ಮನೆಯಲ್ಲೇ ಇರುತ್ತೀನಿ ಎಂದರೂ ಸನ್‌ಸ್ಕ್ರೀನ್ ಹಚ್ಚಿ. ಸೂರ್ಯನ ಕಿರಣಗಳು ಮನೆಯ ಒಳಗೂ ಬರುತ್ತವೆ ಅಲ್ವಾ?
  • ಪ್ರತಿ ಮೂರು ಗಂಟೆಗೊಮ್ಮೆ ಸನ್‌ಸ್ಕ್ರೀನ್ ಬಳಸಿ.

ಉಪಯೋಗ ಏನು?

  • ಹಾನಿಕಾರಕವಾದ ಯುವಿ ಕಿರಣಗಳಿಂದ ರಕ್ಷಣೆ
  • ಬೇಗ ವಯಸ್ಸಾದವರಂತೆ ಕಾಣುವುದು ತಪ್ಪುತ್ತದೆ
  • ಸ್ಕಿನ್ ಕ್ಯಾನ್ಸರ್ ರಿಸ್ಕ್ ಕಡಿಮೆ ಮಾಡುತ್ತದೆ.
  • ಸನ್‌ಬರ್ನ್ ಆಗೋದಿಲ್ಲ.
  • ಟ್ಯಾನ್ ಆಗೋದಿಲ್ಲ
  • ಚರ್ಮದ ಆರೋಗ್ಯ ಹೆಚ್ಚು ಮಾಡುತ್ತದೆ.
  • ಎಲ್ಲದಕ್ಕಿಂತ ಉತ್ತಮ ಕಾಸ್ಮೆಟಿಕ್
  • ಮೈತುಂಬ ಬಟ್ಟೆ ಹಾಕಿದರೂ ಸನ್‌ಸ್ಕ್ರೀನ್ ಹಚ್ಚಿದಷ್ಟು ರಕ್ಷಣೆ ಸಿಗೋದಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!