ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನುಮತಿ ಇಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಕ್ಕಳ ವಿಡಿಯೋ ಅಪ್ಲೋಡ್ ಮಾಡಿದ ಎರಡು ಯೂಟ್ಯೂಬ್ ಚಾನೆಲ್ಗಳ ವಿರುದ್ಧ ಡಿಕೆಶಿ ದೂರು ದಾಖಲಿಸಿದ್ದು, ಎಫ್ಐಆರ್ ದಾಖಲಾಗಿದೆ.
ಡಿಕೆಶಿ ಕಚೇರಿ ಸಿಬ್ಬಂದಿ ಉಮೇಶ್ ಅವರ ದೂರಿನ ಆಧಾರದ ಮೇಲೆ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಿ೪ಯು ಕರ್ನಾಟಕ ಹಾಗೂ ಇಂಡಿಯಾ ರಿಪೋರ್ಟ್ ಹೆಸರಿನ ಯೂಟ್ಯೂಬ್ ಚಾನೆಲ್ಗಳ ಮೇಲೆ ದೂರು ದಾಖಲಿಸಲಾಗಿದೆ. ಡಿಕೆಶಿ ಮಗ ಯಾರು, ಬಂಡೆ ಮಕ್ಕಳು ಏನ್ಮಾಡ್ತಿದ್ದಾರೆ ಎಂಬ ಟೈಟಲ್ನಲ್ಲಿ ವಿಡಿಯೋ ಅಪ್ಲೋಡ್ ಆಗಿದೆ. ಅಪ್ಲೋಡ್ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಡಿಕೆಶಿ ಆಗ್ರಹಿಸಿದ್ದಾರೆ.ಸ