ಹೊಸದಿಗಂತ ಡಿಜಿಟಲ್ ಡೆಸ್ಕ್:
ಟರ್ಕಿಯ ಭೂಕಂಪ ಸಿರಿಯಾ-ಲೆಬನಾನ್ ಗಡಿ ಸೇರಿದಂತೆ ಅಂಕಾರಾ ಮತ್ತು ಹತ್ತಿರದ ಪ್ರದೇಶಗಳಲ್ಲಿ ತನ್ನ ಕದಂಬ ಬಾಹು ಚಾಚಿದ್ದು, ಸುಮಾರು 42 ಜನರು ಸಾವನ್ನಪ್ಪಿದ್ದಾರೆ ಎಂದು ಸಿರಿಯನ್ ಮಾಧ್ಯಮ SANA ವರದಿ ಮಾಡಿದೆ. ಸಿರಿಯನ್ ವಿಶ್ವವಿದ್ಯಾಲಯಗಳಲ್ಲಿ ಸೋಮವಾರ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಸನಾ ತಿಳಿಸಿದೆ.
ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಟ್ವಿಟರ್‌ನಲ್ಲಿ “ಹುಡುಕಾಟ ಮತ್ತು ರಕ್ಷಣಾ ತಂಡಗಳನ್ನು ತಕ್ಷಣವೇ ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಳುಹಿಸಲಾಗಿದೆ” ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊಗಳು ಅನೇಕ ಕುಸಿದ ಕಟ್ಟಡಗಳನ್ನು ತೋರಿಸಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ ಸೂರು ಕಳೆದುಕೊಂಡ ಜನ ಬೀದಿಯಲ್ಲಿ ಕಾಲ ಕಳೆಯುತ್ತಿದ್ದಾರೆ. 7.7ಭೂಕಂಪದ ತೀವ್ರತೆಗೆ ಟರ್ಕಿ ಸುತ್ತ ಮುತ್ತಲಿನ ಪ್ರದೇಶಗಳ ಜನ ತತ್ತರಿಸಿದ್ದಾರೆ.