ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬಿಐಇಸಿಯಲ್ಲಿ ಇಂಧನ ಸಪ್ತಾಹ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ತಂತ್ರಜ್ಞಾನ, ಕೌಶಲ ಹಾಗೂ ಸಂಶೋಧನೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ.
ಜತೆಗೆ ಇಂಧನ ಕ್ಷೇತ್ರದಲ್ಲಿ ಸಂಶೋಧನೆಗಳು ಹೆಚ್ಚಾಗುತ್ತಿವೆ, ಇಂಧನ ಕ್ಷೇತ್ರದ ಬೇಡಿಕೆ ಹೆಚ್ಚುತ್ತಿದ್ದು, ಎಲೆಕ್ಟ್ರಿಕ್ ಹಾಗೂ ಹೈಡ್ರೋಜನ್ ವಾಹನಗಳ ಮೂಲಕ ಈ ಬೇಡಿಕೆ ತಗ್ಗಿಸುತ್ತಿದೆ ಎಂದಿದ್ದಾರೆ. ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಭಾರತದ ಜಿ-10 ಅಧ್ಯಕ್ಷತೆಯ ಅವಧಿಯಲ್ಲಿ ಮೊದಲ ದೊಡ್ಡ ಕಾರ್ಯಕ್ರಮ ನಡೆಯುತ್ತಿದೆ ಎಂದಿದ್ದಾರೆ. ಪ್ರಪಂಚದ ಭವಿಷ್ಯ ನಿರ್ಧರಿಸುವಲ್ಲಿ ಇಂಧನ ಕ್ಷೇತ್ರದ ಪಾತ್ರ ದೊಡ್ಡದು, ಇಂಧನದ ಹೊಸ ಮೂಲಗಳ ಸಂಶೋಧನೆಯಲ್ಲಿ ಭಾರತ ಜಗತ್ತಿಗೇ ನಾಯಕನಾಗಿದೆ ಎಂದಿದ್ದಾರೆ.