ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬೆಳಗಾವಿ ಮಹಾನಗರಪಾಲಿಕೆ ಮೊಟ್ಟ ಮೊದಲ ಬಾರಿಗೆ ಅವಿರೋಧವಾಗಿ ಬಿಜೆಪಿಯ ಸದಸ್ಯೆ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ. ಮೇಯರ್ (Belagavi Mayor) ಆಗಿ ಬಿಜೆಪಿಯ ಶೋಭಾ ಸೋಮನಾಚೆ ಆಯ್ಕೆಯಾಗಿದ್ದರೆ, ಉಪ ಮೇಯರ್ Deputy Mayor ಆಗಿ ಬಿಜೆಪಿಯ ರೇಷ್ಮಾ ಪಾಟೀಲ್ ಆಯ್ಕೆಯಾಗಿದ್ದಾರೆ.
ಮೇಯರ್ ಆಗಿ ಶೋಭಾ ಸೋಮನಾಚೆ ಅವಿರೋಧವಾಗಿ ಆಯ್ಕೆಯಾಗಿದ್ದರೆ, ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿಯ ರೇಷ್ಮಾ ಪಾಟೀಲ್ ಪರ 42 ಮತಗಳು ಚಲಾವಣೆಯಾಗಿದ್ದರೆ, ವೈಶಾಲಿಗೆ ಕೇವಲ 4 ಮತ, ಎಂಇಎಸ್ ಸದಸ್ಯೆ ವೈಶಾಲಿ ಭಾತಕಾಂಡೆಗೆ ಕೇವಲ 4 ಮತಗಳು ಸಿಕ್ಕಿವೆ ಎಂದು ಪ್ರಾದೇಶಿಕ ಆಯುಕ್ತ, ಚುನಾವಣಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದ್ದು, ಬೆಳಗಾವಿ ಮಹಾನಗರಪಾಲಿಕೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅವಿರೋಧವಾಗಿ ಬಿಜೆಪಿಯ ಸದಸ್ಯೆ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ. ನೂತನ ಮಹಾಪೌರರಾದ ಶ್ರೀಮತಿ ಶೋಭಾ ಪಾಯಪ್ಪಾ ಸೋಮನಾಚೆ ಮತ್ತು ಉಪಮಹಾಪೌರರಾದ ಶ್ರೀಮತಿ ರೇಷ್ಮಾ ಪ್ರವೀಣ್ ಪಾಟೀಲ್ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದೆ.