ನೇಪಾಳದ ಯೇತಿ ಏರ್‌ಲೈನ್ಸ್ ವಿಮಾನ ದುರಂತದ ಕಾರಣ ಬಹಿರಂಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನೇಪಾಳದಲ್ಲಿ ನಡೆದ ಯೇತಿ ಏರ್‌ಲೈನ್ಸ್ (Yeti Airlines) ನ ವಿಮಾನ ಪತನ (Nepal Air Crash)ಕ್ಕೆ ಎಂಜಿನ್ ಸಮಸ್ಯೆ (ಯಾಂತ್ರಿಕ ದೋಷ) ಎಂದುತನಿಖಾ ಸಮಿತಿ ಹೇಳಿದೆ.

ಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಮತ್ತು ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಎಂಜಿನ್‌ನಲ್ಲಿ ಗಂಭೀರ ಸಮಸ್ಯೆ ಇದೆ ಎಂದು ಸಮಿತಿ ತಿಳಿಸಿದೆ.

ಜನವರಿ 15ರಂದು ನೇಪಾಳದ ಕಠ್ಮಂಡುವಿನಿಂದ ಪೋಖರಾ ಕಡೆಗೆ ತೆರಳುತ್ತಿದ್ದ ಯೇತಿ ಏರ್‌ಲೈನ್ಸ್ ವಿಮಾನ ದ ಎರಡು ಎಂಜಿನ್‌ನ ಎಟಿಆರ್ 72 ವಿಮಾನ ಭೀಕರ ಅಪಘಾತಕ್ಕೀಡಾಗಿತ್ತು. ಸುಮಾರು 68 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಹೊತ್ತು ಸಾಗುತ್ತಿದ್ದ ಈ ವಿಮಾನ ದುರಂತಕ್ಕೀಡಾಗಿತ್ತು.ಇದರಲ್ಲಿ ಐವರು ಭಾರತೀಯರಾಗಿದ್ದಾರೆ. 53 ನೇಪಾಳಿಗಳು, 5 ಭಾರತೀಯರು, 4 ರಷ್ಯನ್ನರು, ಒಬ್ಬ ಐರಿಶ್, 2 ಕೊರಿಯನ್ನರು, 1 ಅರ್ಜೆಂಟೀನಾದ ಪ್ರಜೆ ಮತ್ತು ಒಬ್ಬ ಫ್ರೆಂಚ್ ಪ್ರಜೆ ವಿಮಾನದಲ್ಲಿದ್ದರು ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿತ್ತು.

ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಲ್ಯಾಂಡಿಂಗ್ ಮೊದಲು ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದರು. ಮಾತ್ರವಲ್ಲದೆ ವಿಮಾನ ದುರಂತದ ಕುರಿತು ತನಿಖೆ ನಡೆಸಲು 5 ಸದಸ್ಯರ ತನಿಖಾ ಆಯೋಗವನ್ನು ರಚಿಸಲಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!