ಹೊಸದಿಗಂತ ವರದಿ ವಿಜಯಪುರ
ಲಂಚ ತಿನ್ನಲಾರದೆ ಎಲ್ಲರಿಗಿಂತ ನನ್ನ ಆಸ್ತಿ ಹೆಚ್ಚಿದೆ ಎಂದು ಖಡಕ್ಕಾಗಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008 ರಿಂದ 2019 ಅವಧಿಯಲ್ಲಿ ಸತತ ಮೂರು ಬಾರಿ ಆಯ್ಕೆಯಾದ 71 ಜನ ಸಂಸದರ ಆಸ್ತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ನಾನು ನಾಲ್ಕು ಸಾವಿರ ರೂಪಾಯಿಗೆ ಒಂದು ಎಕರೆಯಂತೆ ಜಮೀನು ಖರೀದಿ ತೆಗೆದುಕೊಂಡಿದ್ದೇನೆ. 150 ಎಕರೆ ಜಮೀನನ್ನ ಖರೀದಿ ತೆಗೆದುಕೊಂಡಿದ್ದೇನೆ. ಇವತ್ತು ಅದೇ ಜಮೀನು ಪ್ರತಿ ಎಕರೆಗೆ ನಾಲ್ಕು ಸಾವಿರ ರೂಪಾಯಿ ಆಗುತ್ತಾ ? ನನ್ನ ಆಸ್ತಿಯ ಮೌಲ್ಯ ಇದೀಗ ಹೆಚ್ಚಾಗಿದೆ.
ನಾನೇನು ರೋಡ್ ಕೆತ್ತಲು ಹೋಗಿ ರೊಕ್ಕ ತಂದಿದ್ದೇನಾ, ಅಲ್ಲದೇ, ಯಾರಾದರೂ ಕೆಸಿಗೆ ಕೈ ಹಾಕಿದ್ದೇನಾ ? ಎಂದು ಪ್ರಶ್ನಿಸಿದರು.