ಪಠಾಣ್‌ ಚಿತ್ರದ ಬೇಷರಂ ಹಾಡಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಜನವರಿ 25ರಂದು ತೆರೆಕಂಡ ಪಠಾಣ್‌ ಚಿತ್ರ (Pathaan Cinema) ಯಶಸ್ಸಿನತ್ತ ಸಾಗುತ್ತಿದೆ. ಆದ್ರೆ ಈ ಚಿತ್ರ ಬಿಡುಗಡೆಯ ಮುಂಚಿನಿಂದಲೂ ಒಂದಲ್ಲ ಒಂದು ವಿವಾದದ ಎದೆಯಲ್ಲಿಯೇ ಸುದ್ದಿಯಾಗುತ್ತಿತ್ತು.

ಮುಖ್ಯವಾಗಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಬೇಷರಂ ಹಾಡಿನಲ್ಲಿ ಕೇಸರಿ ಬಣ್ಣದ (Saffron colour) ಬಿಕಿನಿ ತೊಟ್ಟಿ ನರ್ತಿಸಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಹಾಡಿನ ಬಳಿಕ ಚಿತ್ರದ ಬೈಕಾಟ್‌ ಟ್ರೆಂಡ್‌ (Boycott trend) ಶುರುವಾಗಿತ್ತು. ಚಿತ್ರ ಬಿಡುಗಡೆಯಾದಾಗಲೂ ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆಗಳೂ ನಡೆದಿದ್ದವು.

ಇದರ ನಡುವೆಯೇ, ಹಲವಾರು ಕ್ಷೇತ್ರದ ಗಣ್ಯರು ಕೇಸರಿ ಬಿಕಿನಿಯ ಕುರಿತು ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (CM Yogi Adithyanath) ಅವರು, ಈ ಬಗ್ಗೆ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ಅವರು ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಿನಿಮಾ ನಿರ್ದೇಶಕರು ಸಿನಿಮಾ ಮಾಡುವಾಗ ವಿವಾದಕ್ಕೆ ಕಾರಣವಾಗುವ ಯಾವುದೇ ದೃಶ್ಯಗಳನ್ನು ಮಾಡಬಾರದು. ಈ ಕುರಿತು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ. ಯಾವುದೇ ನಟ, ನಿರ್ದೇಶಕ ಸಿನಿಮಾ (Cinema) ಮಾಡುವಾಗ ವಿವಾದಕ್ಕೆ ಕಾರಣವಾಗುವ ಅಥವಾ ಸಾರ್ವಜನಿಕರಿಗೆ ನೋವುಂಟು ಮಾಡುವ ದೃಶ್ಯಗಳ ಬಗ್ಗೆ ಜಾಗ್ರತನಾಗಿರಬೇಕು. ಅಂತಹ ದೃಶ್ಯ, ಕಥೆ, ಹಾಡುಗಳನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳಬಾರದು ಎಂದು ಹೇಳಿದರು. ಎಲ್ಲರೂ ಕಲಾವಿದರನ್ನು ಗೌರವಿಸಬೇಕು ಎಂದೂ ಹೇಳಿದ್ದಾರೆ.

ಈ ವೇಳೆ ಉತ್ತರ ಪ್ರದೇಶದಲ್ಲಿ ಕಲೆಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹ ಮತ್ತು ಉತ್ತೇಜನದ ಕುರಿತು ಮಾತನಾಡಿದರು. ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶವು ಒಂದು ನೀತಿಯನ್ನು ಹೊಂದಿದೆ. ಅದನ್ನು ಎಲ್ಲರೂ ಅನುಸರಿಸಲೇಬೇಕಿದೆ. ಉತ್ತರ ಪ್ರದೇಶದಲ್ಲಿ ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಚಿತ್ರಗಳಲ್ಲಿ ಉತ್ತಮ ಪ್ರೋತ್ಸಾಹ ಮತ್ತು ವಾತಾವರಣ ಇದೆ. ಇದರಿಂದಾಗಿ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಚಿತ್ರಗಳ ಚಿತ್ರೀಕರಣ ಹೆಚ್ಚಾಗಿದೆ. ಆದರೆ ಚಲನಚಿತ್ರವನ್ನು ನಿರ್ಮಿಸುವಾಗ ಯಾರ ಭಾವನೆಗೂ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!