ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮುಂಬೈ ನಡುವಿನ 1,386 ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇ ಫೆಬ್ರವರಿ 12ಕ್ಕೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಇದಕ್ಕೂ ಮುನ್ನ ದೌಸಾ ಸೊಹ್ನ ಎಕ್ಸ್‌ಪ್ರೆಸ್‌ವೇ ಮಾರ್ಗದ ಸಮೀಪದಲ್ಲಿರುವ ಭಾಂಕ್ರಿ ರಸ್ತೆಯಲ್ಲಿ ಬರೋಬ್ಬರಿ 1,000 ಕೆಜಿ ತೂಕದ ಸ್ಫೋಟಕ ವಸ್ತು ಪತ್ತೆಯಾಗಿದೆ.
ದೌಸಾ ನಿವಾಸಿಯೊಬ್ಬನನ್ನು ಭದ್ರತಾ ಪಡೆಗಳು ಬಂಧಿಸಿದೆ. ಮೋದಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವ ಮೊದಲೇ ಸ್ಫೋಟಕಗಳು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ. ಆದರೆ ಇದು ಮೈನಿಂಗ್‌ಗಾಗಿ ಇಟ್ಟಿರುವ ಸ್ಫೋಟಕ ಎಂದು ಬಂಧಿತ ವ್ಯಕ್ತಿ ಪೊಲೀಸರ ಮುಂದೆ ಹೇಳಿದ್ದಾರೆ. ಇತ್ತ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.
ಬಂಧಿತ ವ್ಯಕ್ತಿಯಿಂದ ಎಲೆಕ್ಟ್ರಿಕ್ ಡೆಟೋನೇಟರ್, ಸ್ಫೋಟಕ ಬ್ಯಾಟರಿ, ವೈಯರ್ ವಶಕ್ಕೆ ಪಡೆಯಲಾಗಿದೆ. ಪೊಲೀಸರು ವಶಕ್ಕೆ ಪಡೆದಿರುವ ವ್ಯಕ್ತಿ ಈ ಕುರಿತು ಸ್ಪಷ್ಟನೆ ನೀಡಿದ್ದಾನೆ. ಇದು ಮೈನಿಂಗ್ ಸ್ಫೋಟಕ ವಸ್ತುಗಳಾಗಿದೆ. ಮೈನಿಂಗ್ ಕಾರಣಕ್ಕೆ ಬಳಸುತ್ತಿದ್ದೇನೆ. ಇತರ ಯಾವುದೇ ಕೃತ್ಯಕ್ಕೆ ಬಳಸುತ್ತಿಲ್ಲ. ತನ್ನ ಮೈನಿಂಗ್ ಕೆಲಸ ಹಾಗೂ ಕೆಲಸಗಾರರ ಕುರಿತು ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೆಹಲಿ ಮುಂಬೈ ಎಕ್ಸ್‌ಪ್ರೆಸ್ ವೇ ಒಟ್ಟು 1,386 ಕಿಲೋಮೀಟರ್ ಉದ್ದದ ಹೆದ್ದಾರಿಯಾಗಿದೆ. ಈಗಾಗಲೇ ಈ ಎಕ್ಸ್‌ಪ್ರೆಸ್‌ವೇ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ವಿಶ್ವದರ್ಜೆಯ ರಸ್ತೆ ನಿರ್ಮಾಣವಾಗುತ್ತಿದೆ.