ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಟರ್ಕಿ ಮತ್ತು ನೆರೆಯ ಸಿರಿಯಾ ದೇಶದಲ್ಲಿ ಭೂಕಂಪನದಿಂದ ಜನರ ಮಾರಣಹೋಮ ಮುಂದುವರಿದಿದ್ದು, ಮೃತರ ಸಂಖ್ಯೆ 19,300 ದಾಟಿದೆ.
ಇದರ ನಡುವೆ ಇತ್ತ ಇಂಡೋನೇಷ್ಯಾದ ಪಪುವಾದಲ್ಲಿಯೂ ಗುರುವಾರ ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ ಒಂದೂವರೆ ಸುಮಾರಿಗೆ ಭೂಕಂಪ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ.
ರಿಕ್ಟರ್ ಮಾಪನದಲ್ಲಿ 5.2 ತೀವ್ರತೆ ದಾಖಲಾಗಿದ್ದು, ಭೂಖಂಪದ ತೀವ್ರತೆಯಿಂದ ಉಂಟಾದ ಅನಾಹುತಗಳಿಂದಾಗಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.