ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ನಡೆಯುವ ಏಷ್ಯಾದ ಅತಿದೊಡ್ಡ ಏರ್ ಶೋ ಇನ್ನೇನು ಕೆಲವೇ ಕ್ಷಣಗಳಲ್ಲಿ ಶುರುವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು 14ನೇ ಆವೃತ್ತಿಯ ಏರ್ ಶೋ ಊದ್ಘಾಟಿಸಲು ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಬೆಳಗ್ಗೆ 9:30ಕ್ಕೆ ಯಲಹಂಕ ವಾಯುನೆಲೆಯಲ್ಲಿ ನರೇಂದ್ರ ಮೋದಿ ಏರ್ ಶೋಗೆ ಚಾಲನೆ ನೀಡಲಿದ್ದು, 9.30ರಿಂದ 11.30ರವರೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆ ಬಳಿಕ ಪ್ರಧಾನಿಯವರು ಏರೋ ಇಂಡಿಯಾದ ವೈಮಾನಿಕ ಪ್ರದರ್ಶನ ವೀಕ್ಷಿಸಲಿದ್ದಾರೆ. 11:30ಕ್ಕೆ ಏರ್ ಶೋ ಸ್ಥಳದಿಂದ ಹೊರಟು, ಯಲಹಂಕ ಏರ್‌ಫೋರ್ಸ್‌ಗೆ ಆಗಮಿಸಲಿರುವ ನರೇಂದ್ರ ಮೋದಿ ಅಲ್ಲಿಂದ ನೇರವಾಗಿ IAF BBJ ವಿಮಾನದಲ್ಲಿ ತ್ರಿಪುರಾಗೆ ತೆರಳಲಿದ್ದಾರೆ.
ಭಾನುವಾರ ಸಂಜೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಯವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ತ್, ಸಿಎಂ ಬಸವರಾಜ ಬೊಮ್ಮಾಯಿ ಆತ್ಮೀಯವಾಗಿ ಸ್ವಾಗತಿಸಿದರು. ರಾತ್ರಿ ರಾಜಭವನದಲ್ಲೇ ವಾಸ್ತವ್ಯ ಹೂಡಿರುವ ಪ್ರಧಾನಿ ಬೆಳಗ್ಗೆ 8.50ಕ್ಕೆ ಹೊರಟು ಯಲಹಂಕ ವಾಯುನೆಲೆಗೆ ತಲುಪಲಿದ್ದಾರೆ.
ಈ ಏರ್ ಶೋ ಇಂದಿನಿಂದ 17ರವೆರೆಗೆ ಅಂದರೆ 5 ದಿನಗಳ ಕಾಲ ನಡೆಯಲಿದೆ.