397 ಅಂಕ ಕುಸಿದ ಸೆನ್ಸೆಕ್ಸ್:‌ ಇಂದಿನ ಷೇರುಪೇಟೆ ಹೀಗಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶುಕ್ರವಾರ ಭಾರತೀಯ ಈಕ್ವಿಟಿ ಮಾರುಕಟ್ಟೆಗಳು ಕೆಂಬಣ್ಣದಲ್ಲಿ ತೆರೆದಿದ್ದು ಪ್ರಮುಖ ಸೂಚ್ಯಂಕಗಳು ನಷ್ಟದಲ್ಲಿ ತೂಗುತ್ತಿವೆ. ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 397.67 ಪಾಯಿಂಟ್‌ ಕುಸಿದು 60,921.84 ಪಾಯಿಂಟ್‌ಗಳಿಗೆ ತಲುಪಿದೆ. ನಿಫ್ಟಿ 108.4 ಅಂಕ ಇಳಿಕೆಯಾಗಿ 17,927.45 ಅಂಕಗಳಿಗೆ ತಲುಪಿದೆ.

ವಿಶಾಲವಾದ ಮಾರುಕಟ್ಟೆಗಳು ಹೆಚ್ಚಾಗಿ ಕೆಂಪು ಬಣ್ಣದಲ್ಲಿ ತೆರೆಯಲ್ಪಟ್ಟಿವೆ. ನಿಫ್ಟಿ ಫಾರ್ಮಾ ಮತ್ತು ನಿಫ್ಟಿ ಪಿಎಸ್‌ಯು ಬ್ಯಾಂಕ್‌ಗಳು 0.7 ಶೇಕಡಾದಷ್ಟು ಕುಸಿದಿವೆ. ಆದರೆ ನಿಫ್ಟಿ ಮೀಡಿಯಾ ಮತ್ತು ನಿಫ್ಟಿ ಮೆಟಲ್ ಮಾತ್ರ ತುಸು ಮಿಂಚುವ ವಲಯಗಳಾಗಿ ಉಳಿದಿವೆ.

ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ 8 ಪೈಸೆ ಕುಸಿದು 82.78 ಕ್ಕೆ ತಲುಪಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!