ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಲು ತಪಾಸಣೆ ವೇಳೆ ಅಧಿಕಾರಿಗಳಿಗೆ ಹೆದರಿ ಕೈದಿಯೊಬ್ಬ ಮೊಬೈಲ್ ನುಂಗಿದ್ದಾನೆ. ಬಿಹಾರದ ಗೋಪಾಲಗಂಜ್ ಜೈಲಿನಲ್ಲಿ ವಿಚಿತ್ರ ಘಟನೆ ನಡೆದಿದೆ, ಕ್ವೈಷರ್ ಅಲಿ ಎಂಬ ಕೈದಿ ತಪಾಸಣೆಗೆ ಬರುತ್ತಿರುವ ವಿಷಯ ತಿಳಿದು, ಮೊಬೈಲ್ ಎಲ್ಲಿಡಲಿ ಎಂದು ಯೋಚಿಸಿ ಭಯಕ್ಕೆ ಮೊಬೈಲ್ ನುಂಗಿದ್ದಾನೆ.
ಕೈದಿಗೆ ಹೊಟ್ಟೆನೋವು ಹೆಚ್ಚಾದಾಗ, ಮೊಬೈಲ್ ನುಂಗಿರುವ ವಿಷಯ ಹೇಳಿದ್ದಾರೆ, ಎಕ್ಸ್ರೇ ಮಾಡಿದ್ದು, ಹೊಟ್ಟೆಯಲ್ಲಿ ಮೊಬೈಲ್ ಇರುವುದು ಪತ್ತೆಯಾಗಿದೆ. ಹೆಚ್ಚಿನ ಚಿಕಿತ್ಸೆಗೆ ಕೈದಿಯನ್ನು ಪಟ್ನಾ ಮೆಡಿಕಲ್ ಕಾಲೇಜ್ಗೆ ರವಾನಿಸಲಾಗಿದೆ.