Wednesday, December 10, 2025

ಕಲ್ಲು ಎತ್ತಿ ಯುವಕನ ಬರ್ಬರ ಕೊಲೆ: ಬಳಿಕ ಶವದ ಮುಂದೆ ವಿಡಿಯೋ ಮಾಡಿ ವಿಕೃತಿ ಮೆರೆದ ಹಂತಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಹಾಸನ ತಾಲೂಕಿನ ಹೂವಿನಹಳ್ಳಿ ಕಾವಲು ಗ್ರಾಮದ ನಿವಾಸಿ ಮೆಕ್ಯಾನಿಕ್ ಕೀರ್ತಿ(22) ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದ್ದು, ಬಳಿಕ ಹಂತಕರು ಶವ ಮುಂದೆ ಸೆಲ್ಫಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ.

ನಾವೇ ಇವನನ್ನು ಹೊಡೆದು ಕೊಂದಿದ್ದೇವೆಂದು ಶವದೊಂದಿಗೆ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಇದೇ ವಿಡಿಯೋವನ್ನು ಆಧರಿಸಿ ಸ್ಥಳಕ್ಕೆ ಶ್ವಾನದಳ, ಎ‌ಎಸ್‌ಪಿ ಭೇಟಿ ಪರಿಶೀಲನೆ ನಡೆಸಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆತ ವೃತ್ತಿಯಲ್ಲಿ ವ್ಯಕ್ಯಾನಿಕ್ ಆಗಿದ್ದ. ಕೆಲಸ ಮಾಡುತ್ತಾ ತನ್ನ ಪಾಡಿಗೆ ತಾನಿದ್ದವನು. ರೀಲ್ಸ್ ಮಾಡುತ್ತಾ ಸ್ನೇಹಿತರ ಜೊತೆ ಸುತ್ತಾಡ್ತಾ ಇದ್ದವನು ನಿನ್ನೆ (ಡಿಸೆಂಬರ್ 08) ಎಷ್ಟೊತ್ತಾದ್ರು ಮನೆಗೆ ಬಂದಿಲ್ಲ ಏನಾಯ್ತು ಎಂದು ಎಲ್ಲರೂ ಆತಂಕದಲ್ಲಿರುವಾಗ ಬೆಳಿಗ್ಗೆ ವೀಡಿಯೋ ವೊಂದು ವೈರಲ್ ಆಗಿದೆ. ಕ್ರೂರಿಯೊಬ್ಬ ಶವದ ಮುಂದೆ ಸೆಲ್ಪೀ ವೀಡಿಯೋ ಮಾಡಿ ನಾವು ಕೊಲೆ ಮಾಡಿದಿವಿ ಸಾಯಿಸಿದ್ದೇವೆ ಎಂದು ಹೇಳುತ್ತ ಕ್ರೌರ್ಯ ಮೆರೆದಿದ್ದಾನೆ. ಈ ವೀಡಿಯೋ ಜಾಡು ಹಿಡಿದು ತನಿಖೆಗಿಳಿದ ಪೊಲೀಸರಿಗೆ ಕೊಲೆಯಾಗಿದ್ದು ಓರ್ವ ಮೆಕ್ಯಾನಿಕ್. ಕೊಲೆ ಮಾಡಿದ್ದು ಆಟೋ ಚಾಲಕ ಎನ್ನುವುದು ಗೊತ್ತಾಗಿದೆ.

ಕೊಲೆ ಮಾಡಿದ ಬಳಿಕ ಮನುಷ್ಯತ್ವ ಮರೆತ ಕ್ರೂರಿಯೊಬ್ಬ ನಾವು ಹೊಡೆದಿದ್ದೇವೆ. ನಾವು ಇವನನ್ನ ಸಾಯಿಸಿದ್ದೇವೆ ಎಂದು ವಿಕೃತ ಆನಂದಪಟ್ಟಿದ್ದಾರೆ. ಇನ್ನು ಮತ್ತೊಂದು ವೀಡಿಯೋದಲ್ಲಿ ಹೇಯ್ ನಿಂತ್ಕೊಳ್ರೋ ನಾವು ದೊಡ್ಡದಾಗಿ ಬೆಳೆದು, ನಾವೂ ದೊಡ್ಡವರಾದ್ವಿ ಎಂದು ಹೇಳುತ್ತಾ ಕೊಲೆಯನ್ನ ಸಂಭ್ರಮಿಸಿದ್ದಾರೆ. ಕೊಲೆ ಮಾಡಿ ನಾವು ದೊಡ್ಡವರಾದ್ವಿ ನಾವೂ ಬೆಳೆದ್ವಿ ಎಂದು ಹೇಳುತ್ತಾ ಅಟ್ಟಹಾಸ ಮೆರೆದಿದ್ದಾರೆ. ಗಾಂಜಾ ಅಮಲಿನಲ್ಲಿ ಪುಂಡರ ರಾಕ್ಷಸೀ ಕೃತ್ಯ ಎಸಗಿದ್ದಾರೆ. ಹೀಗಾಗಿ ಈ ಹತ್ಯೆ ವಿಡಿಯೋ ಹಾಸನದಾದ್ಯಂತ ವೈರಲ್ ಆಗಿದ್ದು, ಜನರನ್ನ ಬೆಚ್ಚಿಬೀಳೀಸಿದೆ.

ಅಷ್ಟಕ್ಕೂ ವೀಡಿಯೋ ಮಾಡಿರುವುದು ಉಲ್ಲಾಸ್ ಎಂದು ತಿಳಿದುಬಂದಿದೆ. ಆಟೋ ಚಾಲಕನಾಗಿರುವ ಈತ ಹಾಸನ ಜಿಲ್ಲೆ ಆಲೂರು ಮೂಲದವನು ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಕೊಲೆ ಮಾಡಿ ವೀಡಿಯೋ ಮಾಡಿರುವ ಪಾತಕಿ ಉಲ್ಲಾಸ್ ಒಂದು ವೀಡಿಯೋದಲ್ಲಿ ತಾನೊಬ್ಬನೇ ಇದ್ದರೆ ಇನ್ನೊಂದು ವೀಡಿಯೋದಲ್ಲಿ ಮತ್ತಿಬ್​ಬರು ಇರೋದನ್ನ ತೋರಿಸಿದ್ದಾನೆ. ಜೊತೆಗೇ ತೆರಳಿದ್ದ ಯುವಕರ ಗುಂಪಿನ ನಡುವೆ ಗಲಾಟೆ ನಡೆದು ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದ್ದು, ಹಾಸನ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!