Wednesday, December 10, 2025

ದಿನಭವಿಷ್ಯ: ಹಣ ಗಳಿಕೆ ಹೆಚ್ಚಾಗುತ್ತದೆ, ಮನೆಯಲ್ಲಿ ಸಂಭ್ರಮದ ಪರಿಸರ

ಮೇಷ
ಕೆಲವು ಮುಖ್ಯ ಕೆಲಸ ಇಂದು ಪೂರೈಸುವ ಸಾಧ್ಯತೆ. ಒತ್ತಡದಿಂದ ಬಿಡುವು. ಮನೆಯವರ ಜತೆ ಹೆಚ್ಚು ವಿರಾಮದ ಕಾಲಕ್ಷೇಪಕ್ಕೆ ಅವಕಾಶ.    
ವೃಷಭ
ಹಣ ಗಳಿಕೆಯಲ್ಲಿ  ಸಫಲತೆ. ಮನೆಯಲ್ಲಿ ಸಂಭ್ರಮದ ಪರಿಸರ. ಆಪ್ತೇಷ್ಟರೊಡನೆ ಕಾಲಕ್ಷೇಪ. ದೈವಾನುಗ್ರಹ ನಿಮಗಿದೆ, ಉದ್ದೇಶ ಪ್ರಾಪ್ತಿ.  
ಮಿಥುನ
ಮನಸ್ಸಿನ ನೆಮ್ಮದಿ ಕೆಡಿಸುವ ಒಂದೆರಡು ಘಟನೆ ಉಂಟಾದೀತು. ಭಾವಾವೇಶದಿಂದ ಪ್ರತಿಕ್ರಿಯಿಸಬೇಡಿ.  ಯೋಚಿಸಿ ಹೆಜ್ಜೆಯಿಡಿ.        
ಕಟಕ
ಒತ್ತಡದಿಂದ  ವಿರಾಮ ಸಿಗಲಿದೆ. ಆದರೂ ನಿಮ್ಮ ಮನದ ಚಿಂತೆ ಮುಗಿಯದು. ಮನೆಯಲ್ಲಿ ವಾಗ್ವಾದ ನಡೆಸದಿರಿ. ಅವರ ಮಾತಿಗೂ ಬೆಲೆ ಕೊಡಿ.  
ಸಿಂಹ
ಮಿಶ್ರ-ಲದ ದಿನ. ಸಂಭ್ರಮದ ನಡುವೆಯೆ ಮನಸ್ಸು ಕೆಡಿಸುವ ಬೆಳವಣಿಗೆ ಕೂಡಾ ಉಂಟಾದೀತು. ತಾಳ್ಮೆಯ ನಡೆನುಡಿ ಅವಶ್ಯ.  
ಕನ್ಯಾ
ಮನದೊಳಗಿನ ಅಸಹನೆ ಹೊರಗೆ ಧುಮುಕಲು ಅವಕಾಶ ಕೊಡಬೇಡಿ. ಎಲ್ಲರ ಜತೆ ಸೌಹಾರ್ದದಿಂದ ವರ್ತಿಸಿ. ಅದೃಷ್ಟ ನಂಬಿ ಕೂರದಿರಿ.  
ತುಲಾ
ಏಕಾಗ್ರತೆ ಕೆಡಿಸುವ ಬೆಳವಣಿಗೆ. ಮನದಲ್ಲಿ ಹಲವಾರು ಚಿಂತನೆಗಳು. ನೆಗೆಟಿವ್ ಚಿಂತನೆ ಬಿಡಿ, ಉಳಿದವರ ಸಂಭ್ರಮದಲ್ಲಿ ಪಾಲ್ಗೊಳ್ಳಿರಿ.        
ವೃಶ್ಚಿಕ
ಬಂಧು ಬಳಗದ ಜತೆ ಕೂಡಿ ಕಳೆಯುವ ಅವಕಾಶ. ವ್ಯವಹಾರದಲ್ಲಿ ಸಂತೃಪ್ತಿ. ಎಲ್ಲವೂ ಇದ್ದೂ ಆಧ್ಯಾತ್ಮಿಕ ಚಿಂತನೆ ನಿಮ್ಮನ್ನು ಕಾಡಬಹುದು.              
ಧನು
ಏಕಕಾಲದಲ್ಲಿ ಹಲವಾರು ಹೊಣೆ ನಿಭಾಯಿಸಬೇಕಾದ ಪರಿಸ್ಥಿತಿ. ಸಮರ್ಥವಾಗಿ ನಿರ್ವಹಿಸುವಿರಿ ಎಂಬುದೇ ನಿಮ್ಮ ವಿಶೇಷತೆ.          
ಮಕರ
ಪರಿಸ್ಥಿತಿಗೆ ತಕ್ಕಂತೆ ಕ್ಷಿಪ್ರ ಕಾರ್ಯಾಚರಿಸಿ. ಮುಖ್ಯ ವಿಷಯ ನನೆಗುದಿಗೆ ಇಡಬೇಡಿ. ಆರೋಗ್ಯ ಸಮಸ್ಯೆ ಪರಿಹಾರ, ನೆಮ್ಮದಿ.  
ಕುಂಭ
ನಕಾರಾತ್ಮಕ ಚಿಂತನೆ  ಹಚ್ಚಿಕೊಳ್ಳುವಿರಿ. ಆಪ್ತರ ಜತೆ ಭಿನ್ನಮತ ಸಂಭವ. ನಿಮ್ಮದೇ ಸರಿಯಿದ್ದರೂ ಮೌನವಾಗಿ ಕೂರಬೇಕಾದ ಅನಿವಾರ್ಯತೆ.      
ಮೀನ
ದಿನವಿಡೀ ಉತ್ಸಾಹ. ಆತ್ಮೀಯರ ಸಂತೋಷದಲ್ಲಿ ನೀವೂ  ಭಾಗಿಯಾಗುವಿರಿ. ಸಂಬಂಧ ವೃದ್ಧಿ. ವ್ಯವಹಾರ ಸುಗಮ, ಧನವೃದ್ಧಿ.

error: Content is protected !!