July 17, 2026
Friday, July 17, 2026
spot_img

FOOD | 5 ನಿಮಿಷದಲ್ಲಿ ತಯಾರಾಗುವ Oreo ಮಗ್ ಕೇಕ್! ನೀವೂ ಒಮ್ಮೆ ಟ್ರೈ ಮಾಡಿ

ಕೇಕ್ ತಿನ್ಬೇಕು, ಆದರೆ ಒವನ್ ಇಲ್ಲ, ಸಮಯವೂ ಕಡಿಮೆ ಇದೆ ಅಂದಾಗ… ಓರಿಯೋ ಮಗ್ ಕೇಕ್ ಸೂಪರ್ ಸೊಲ್ಯೂಷನ್. ಕೇವಲ ಕೆಲವು ಪದಾರ್ಥಗಳು, ಒಂದು ಮಗ್ ಮತ್ತು ಮೈಕ್ರೋವೇವ್ ಸಾಕು. ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಈ ಕೇಕ್ ರುಚಿಯಲ್ಲಿ ಚಾಕ್ಲೇಟ್ ಕೇಕ್‌ಗೆ ಕಡಿಮೆಯೇ ಇಲ್ಲ.

ಬೇಕಾಗುವ ಸಾಮಗ್ರಿಗಳು

ಓರಿಯೋ ಬಿಸ್ಕಟ್ – 4 ರಿಂದ 5
ಹಾಲು – 4 ಟೇಬಲ್ ಸ್ಪೂನ್
ಬೇಕಿಂಗ್ ಪೌಡರ್ – ಒಂದು ಚಿಟಿಕೆ
ಸಕ್ಕರೆ – 1 ಟೀ ಸ್ಪೂನ್ (ಐಚ್ಛಿಕ)
ಚಾಕ್ಲೇಟ್ ಚಿಪ್ಸ್ ಅಥವಾ ಓರಿಯೋ ಕ್ರಂಬ್ಸ್ – ಅಲಂಕಾರಕ್ಕೆ

ಮಾಡುವ ವಿಧಾನ

ಒಂದು ಮೈಕ್ರೋವೇವ್‌-ಸೇಫ್ ಮಗ್ ನಲ್ಲಿ ಓರಿಯೋ ಬಿಸ್ಕಟ್‌ಗಳನ್ನು ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಇದಕ್ಕೆ ಹಾಲು ಸೇರಿಸಿ ಗಂಟುಗಳಿಲ್ಲದಂತೆ ಮೃದುವಾಗಿ ಕಲಸಿ. ಈಗ ಬೇಕಿಂಗ್ ಪೌಡರ್ ಒಂದು ಚಿಟಿಕೆ ಸೇರಿಸಿ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ.

ಮಗ್ಗನ್ನು ಮೈಕ್ರೋವೇವ್‌ನಲ್ಲಿ 1 ನಿಮಿಷ 30 ಸೆಕೆಂಡ್‌ಗಳಿಂದ 2 ನಿಮಿಷಗಳವರೆಗೆ ಬೇಯಿಸಿ. (ಮೈಕ್ರೋವೇವ್ ಪವರ್ ಪ್ರಕಾರ ಸಮಯ ಸ್ವಲ್ಪ ವ್ಯತ್ಯಾಸವಾಗಬಹುದು.) ಮಧ್ಯೆ ಒಮ್ಮೆ ಚೆಕ್ ಮಾಡಬಹುದು. ಮೇಲ್ಮೈ ಸೆಟ್ ಆಗಿ ಟೂತ್‌ಪಿಕ್ ಹಾಕಿದಾಗ ಸ್ವಚ್ಛವಾಗಿ ಬಂದರೆ ಕೇಕ್ ರೆಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !