ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಮಾಲಾಶ್ರೀ ಶಿರಡಿ ಸಾಯಿಬಾಬಾ ದರ್ಶನ ಪಡೆದು ಚಿನ್ನದ ಕಿರೀಟವನ್ನು ಸಮರ್ಪಿಸಿದ್ದಾರೆ. ಮಕ್ಕಳ ಜೊತೆಗೆ ಶಿರಡಿಗೆ ತೆರಳಿದ ಅವರು, ಸಾಯಿಬಾಬಾರ ಮುಂದೆ ಕುಟುಂಬದ ಪರವಾಗಿ ಈ ಕಾಣಿಕೆಯನ್ನು ನೀಡಿದರು.
ಸಾಯಿಬಾಬಾರ ಮೇಲೆ ತಮ್ಮ ಅಚಲ ನಂಬಿಕೆಯನ್ನು ವ್ಯಕ್ತಪಡಿಸಿದ ಮಾಲಾಶ್ರೀ, ತಮ್ಮ ಮಗಳ ಹೊಸ ಸಿನಿಮಾ ಆರಂಭಕ್ಕೂ ಮುನ್ನ ಶಿರಡಿಗೆ ಬಂದು ಆಶೀರ್ವಾದ ಪಡೆದಿರುವುದಾಗಿ ತಿಳಿಸಿದರು. ನಮ್ಮ ಜೀವನದ ಕಷ್ಟದ ಹಂತಗಳಲ್ಲಿ ಬಾಬಾ ಅಪಾರ ಶಕ್ತಿ ಮತ್ತು ಧೈರ್ಯ ನೀಡಿದ್ದಾರೆ. ಇದೊಂದು ದೊಡ್ಡ ಕಾಣಿಕೆ ಅಲ್ಲ, ನಮ್ಮ ಭಕ್ತಿಯ ಚಿಕ್ಕ ಸಂಕೇತ ಅಷ್ಟೇ ಎಂದು ಅವರು ಭಾವುಕವಾಗಿ ಹೇಳಿದ್ದಾರೆ.

