Friday, December 12, 2025

ದಿನಭವಿಷ್ಯ: ಕಾಯಕದಲ್ಲಿ ಒತ್ತಡ ಹೆಚ್ಚಿದರೂ, ಯಶಸ್ಸು ನಿಶ್ಚಿತ! ಹಣಕಾಸಿಗೆ ಹೊಸ ದಾರಿ

ಮೇಷ
ಫಲಪ್ರದ ದಿನ. ಕೈಗೊಳ್ಳುವ ನಿರ್ಧಾರ ಸಫಲ. ವೃತ್ತಿಯಲ್ಲೂ ಉನ್ನತಿ. ದೈಹಿಕ ನೋವು ಕಾಡುತ್ತಿದ್ದರೆ ಅದರಿಂದ ಮುಕ್ತಿ ಸಿಗಲಿದೆ.
ವೃಷಭ
ನಿಮ್ಮ ಸುತ್ತಲಿನ ಬೆಳವಣಿಗೆ ಸರಿಯಾಗಿ ವೀಕ್ಷಿಸಿ. ನಿಮ್ಮ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸೂಕ್ತ ಮುನ್ನೆಚ್ಚರಿಕೆಯಿಂದಿರಿ.
ಮಿಥುನ
ಕುಟುಂಬದಲ್ಲಿ ಹೊಂದಾಣಿಕೆ. ವಿರಸ ಅಂತ್ಯ. ವೃತ್ತಿಯಲ್ಲಿ ಹಿನ್ನಡೆ ಕಂಡರೂ ಅದು ಬೇಗ ಸರಿಯಾಗಲಿದೆ. ಹಾಗಾಗಿ ದಿನದಂತ್ಯಕ್ಕೆ ನಿಶ್ಚಿಂತೆ.
ಕಟಕ
ವೃತ್ತಿಯಲ್ಲಿ ಯಶ. ಖಾಸಗಿ ಬದುಕಲ್ಲೂ ಸಮಸ್ಯೆ ನಿವಾರಣೆ. ನಿಮ್ಮ ವಿಶ್ವಾಸ ಕುಂದಿಸಲು ಕೆಲವರ ಯತ್ನ. ಅವರನ್ನು ದೂರವಿಡಿ.
ಸಿಂಹ
ಸ್ಪಷ್ಟ ಆಲೋಚನೆ ನಿಮ್ಮ ಸಮಸ್ಯೆ, ಗೊಂದಲ ಪರಿಹರಿಸುವುದು. ಇತರರ ಮಾತಿಗೆ ಮರುಳಾಗದಿರಿ. ಏಕಾಕಿಗಳಿಗೆ ಸಂಗಾತಿ ಸಿಗುವ ಸಾಧ್ಯತೆಯಿದೆ.
ಕನ್ಯಾ
ಉತ್ಸಾಹ ಹೆಚ್ಚಿಸುವ ಬೆಳವಣಿಗೆ. ಆದರೆ ಅದರ ಹಿಂದೆಯೇ ಸಮಸ್ಯೆಯೂ ಇರಬಹುದು. ಹಾಗಾಗಿ ಎಚ್ಚರದಿಂದ ಪ್ರತಿಕ್ರಿಯಿಸಿ. ಕೌಟುಂಬಿಕ ಅಸಹಕಾರ.
ತುಲಾ
ವೃತ್ತಿಯಲ್ಲಿ ಒತ್ತಡ ಹೆಚ್ಚು. ಕೆಲವು ವಿಷಯ ಗಂಭೀರವಾಗಿ ತೆಗೆದುಕೊಳ್ಳದಿರಿ. ಆಪ್ತರ ಜತೆ ಒಡನಾಟದಿಂದ ದುಮ್ಮಾನ ಪರಿಹಾರ.
ವೃಶ್ಚಿಕ
ನಿಮ್ಮ ಘನತೆಗೆ ಕುಂದು ತರಲು ಕೆಲವರ ಯತ್ನ. ಅದಕ್ಕೆ ಅವಕಾಶ ನೀಡದಿರಿ. ವಿರೋಽಯನ್ನು ದಿಟ್ಟವಾಗಿ ಎದುರಿಸಿ.
ಧನು
ಭಾವುಕತೆ ಬಿಡಿ. ಪ್ರಾಕ್ಟಿಕಲ್ ಆಗಿ ವರ್ತಿಸಿ. ಅದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ವೃತ್ತಿಯಲ್ಲಿ ವಿರೋಧ ಹೆಚ್ಚಲಿದೆ.
ಮಕರ
ಈ ದಿನ ಸುಗಮ ವಾಗಿ ಸಾಗಲಿದೆ. ವಿರೋಧ ಶಮನ. ಟೀಕಾಕಾರರು ಸೋಲು ಕಾಣುವರು. ಆರ್ಥಿಕ ಒತ್ತಡ ನಿವಾರಣೆ, ಧನಾಗಮ ಹೆಚ್ಚಳ.
ಕುಂಭ
ನಿಮ್ಮ ವಿಶ್ವಾಸ ಕುಂದಿಸುವ ಪರಿಸ್ಥಿತಿ ಉಂಟಾದೀತು. ಸ್ಥೈರ್ಯ ಕೆಡದಿರಿ. ಅನಿರೀಕ್ಷಿತ ನೆರವು ಒದಗಲಿದೆ. ಆರ್ಥಿಕ ಒತ್ತಡ ಪರಿಹಾರ.
ಮೀನ
ಪ್ರತಿಯೊಂದು ಕಾರ್ಯದಲ್ಲಿ ಗುಣಾತ್ಮಕ ಪ್ರತಿಫಲ ಕಾಣುವಿರಿ. ಕೌಟುಂಬಿಕ ಉದ್ವಿಗ್ನತೆ ಶಮನಗೊಳಿಸಲು ಆದ್ಯತೆ ಕೊಡಿ. ಧನಪ್ರಾಪ್ತಿ.

error: Content is protected !!