VIRAL VIDEO| 20 ಲಕ್ಷ ರೂ. ಲಂಚ ಪಡೆದ ಐಪಿಎಸ್ ಅಧಿಕಾರಿ: ಕೆಲವೇ ಗಂಟೆಗಳಲ್ಲಿ ತನಿಖೆ ಆರಂಭಿಸಿದ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಲಂಚ ಪಡೆದು ಸಿಕ್ಕಿಬಿದ್ದ ಐಪಿಎಸ್ ಅಧಿಕಾರಿ ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರ ಕೆಲವೇ ಗಂಟೆಗಳಲ್ಲಿ ತನಿಖೆಗೆ ಆದೇಶಿಸಿದೆ. 20 ಲಕ್ಷ ಲಂಚ ಸ್ವೀಕರಿಸುವಾಗ ಐಪಿಎಸ್ ಅಧಿಕಾರಿ ಅನಿರುದ್ಧ್ ಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರೀ ಟೀಕೆಗಳು ವ್ಯಕ್ತವಾದ ಕಾರಣ ಅನಿರುದ್ಧ್ ಅವರನ್ನು ತನಿಖೆಗೆ ಒಳಪಡಿಸಬೇಕೆಂದು ವಾರಣಾಸಿ ಪೊಲೀಸ್ ಆಯುಕ್ತರಿಗೆ ಉತ್ತರ ಪ್ರದೇಶ ಡಿಜಿಪಿ ಆದೇಶ ನೀಡಿದ್ದಾರೆ. ಇದಲ್ಲದೆ, ವಾರಣಾಸಿಯಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅನಿರುದ್ಧ್ ಸಿಂಗ್ ಅವರ ಪತ್ನಿ ಆರತಿ ಸಿಂಗ್ ಅವರ ಮನೆ ಬಾಡಿಗೆ ಪಾವತಿಸದ ಆರೋಪದ ಮೇಲೆ ತನಿಖೆಗೆ ಆದೇಶಿಸಲಾಗಿದೆ.

ಅತ್ಯಾಚಾರ ಆರೋಪಿಯನ್ನು ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿರುವ ವೀಡಿಯೊ ಅದು, ನಾನು ಯಾವುದೇ ರೀತಿಯ ಹಣ ಸ್ವೀಕರಿಸಿಲ್ಲ ಎಂದು ಅನಿರುದ್ಧ ಹೇಳುತ್ತಾರೆ. ಅನಿರುದ್ಧ್ ಬಿಹಾರದ 2018 ರ ಬ್ಯಾಚ್ ಐಪಿಎಸ್ ಅಧಿಕಾರಿ. ಈ ವರ್ಷದ ಜನವರಿಯಲ್ಲಿ ಫತೇಪುರ್ ಜಿಲ್ಲೆಯಿಂದ ಮೀರತ್‌ಗೆ ವರ್ಗಾಯಿಸಲಾಗಿದೆ ಎಂದು ಸಂಬಂಧಿಸಿದ ಮೂಲಗಳು ತಿಳಿಸಿವೆ. ಅನಿರುದ್ಧ್ ಸಿಂಗ್ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಭಾನುವಾರ ವಿಡಿಯೋ ವೈರಲ್ ಆದ ನಂತರ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ಐಪಿಎಸ್ ಅಧಿಕಾರಿಯೊಬ್ಬರು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಡಿಯೋ ಯುಪಿಯಲ್ಲಿ ಕಾಣಿಸಿಕೊಂಡಿದೆ. ಮತ್ತು ಬುಲ್ಡೋಜರ್ ಆ ಭ್ರಷ್ಟ ಅಧಿಕಾರಿಯ ಮನೆಗೆ ಹೋಗುತ್ತದೆಯೇ? ಅಥವಾ ತಲೆಮರೆಸಿಕೊಂಡಿರುವ ಐಪಿಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಬೇರೆ ಯಾರಾದರೂ ಇದ್ದಾರೆಯೇ? ಎಂದು ಆರೋಪಿಸಿದರು. ವಿಪಕ್ಷಗಳ ಟೀಕೆಗೆ ಪ್ರತ್ಯುತ್ತರವಾಗಿ ಯುಪಿ ಸರ್ಕಾರ ಅಧಿಕಾರಿ ವಿರುದ್ಧ ತನಿಖೆಗೆ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!