March 6, 2026
Friday, March 6, 2026
spot_img

ಹಾಸ್ಟೆಲ್‌ನಲ್ಲಿ ಯುವಕ ಸೂಸೈಡ್‌? ನಮ್ಮ ಮಗ ಅಂತೋನಲ್ಲ ಎಂದು ಪೋಷಕರ ಕಣ್ಣೀರು

ಕಾಲೇಜ್ ಹಾಸ್ಟೆಲ್​​ನಲ್ಲಿ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದ ಎಸ್​​​ಬಿಎಸ್​​ ಆಯುರ್ವೇದಿಕ್ ಮೆಡಿಕಲ್​​ ಕಾಲೇಜ್ ಹಾಸ್ಟೆಲ್​​ನಲ್ಲಿ ನಡೆದಿದೆ.

BAMS ಅಂತಿಮ ವರ್ಷದಲ್ಲಿ ಓದುತ್ತಿದ್ದ ಈಶ್ವರ ಗಾದಗೆ(21) ಮೃತ ವಿದ್ಯಾರ್ಥಿ. ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕುಟುಂಬಸ್ಥರು ಆಡಳಿತ‌ ಮಂಡಳಿ, ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಟುಂಬಸ್ಥರಿಗೆ ಮಾಹಿತಿ ನೀಡದೇ ಆಸ್ಪತ್ರೆಗೆ ಮೃತದೇಹವನ್ನು ಸಾಗಾಟ ಮಾಡಿದ್ದಾರೆ.

ಮೃತ ವಿದ್ಯಾರ್ಥಿ ಈಶ್ವರ ಗಾದಗೆ ಬೀದರ್​​​ ಜಿಲ್ಲೆಯ ಬಾಲ್ಕಿ ತಾಲೂಕಿನ ಧನ್ನೂರ ಎಸ್ ಗ್ರಾಮದವರು. ಎಸ್​​​ಬಿಎಸ್​​ ಆಯುರ್ವೇದಿಕ್ ಮೆಡಿಕಲ್​​ ಕಾಲೇಜ್​​ನಲ್ಲಿ BAMS ಅಂತಿಮ ವರ್ಷದಲ್ಲಿ ಓದುತ್ತಿದ್ದರು. ಆರು ತಿಂಗಳ ಹಿಂದೆ ಕೂಡ ಕಾಲೇಜ್​​ ಉಪನ್ಯಾಸಕ ಕಿರುಕುಳ ತಾಳಲಾರದೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಇನ್ನು ಎರಡು ಲೈನ್​​​ ಇರುವ ಡೆತ್​​ ನೋಟ್ ಪತ್ತೆ ಆಗಿದೆ. ‘ನನ್ನ ಸಾವಿಗೆ ಯಾರೂ ಕಾರಣ ಅಲ್ಲ, ನಾನೇ ಕಾರಣ. ಸಾರಿ ಮಮ್ಮಿ, ಪಪ್ಪಾ’ ಅಂತ ಬರೆಯಲಾಗಿದೆ. ಆದರೆ ಇದು ನಮ್ಮ ಮಗ ಬರೆದ ಡೆತ್ ನೋಟ್ ಅಲ್ಲ, ನಮ್ಮ ಮಗನ ಬರವಣಿ ಅಲ್ಲ ಎಂದಿದ್ದಾರೆ ಕುಟುಂಬಸ್ಥರು. ಕಾಲೇಜ್​ನವರು ಸೃಷ್ಟಿ ಮಾಡಿರುವ ಡೆತ್ ನೋಟ್ ಅಂತ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !