September 27, 2026
Sunday, September 27, 2026
spot_img

ಅತಿವೇಗದ ಕಾರು ಚಾಲನೆಗೆ ಜೀವವೇ ಹೋಯ್ತು, ಬೆಳಸೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ

ಹೊಸದಿಗಂತ ವರದಿ ಅಂಕೋಲಾ:

ರಾಷ್ಟ್ರೀಯ ಹೆದ್ದಾರಿಯ ನಡುವಿನ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದು ಪಲ್ಟಿಯಾಗಿ ಓರ್ವ ಯುವತಿ ಮೃತಪಟ್ಟು ನಾಲ್ಕು ಜನ ಯುವಕರು ತೀವ್ರ ಗಾಯಗೊಂಡ ಘಟನೆ ತಾಲೂಕಿನ ಬೆಳಸೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.

ತಮಿಳುನಾಡಿನ ರುಜುಲಾ ಮಥೈಲಗಮ್ (26) ಮೃತ ಯುವತಿಯಾಗಿದ್ದು ತಮಿಳುನಾಡಿನ ಹರಿಹರನ್ ಸುಂದರ್ ಪಾಂಡ್ಯನ್ (23) ಅಕ್ಷಯ ಮಥೈಲಗಮ್ (23) ವಿಘ್ನೇಶ ಅಣ್ಢಾದೊರೈ(23)ಮತ್ತು
ಕಾರು ಚಾಲಕ ಶರಣ ಪಾಂಡ್ಯನ್(26) ತೀವ್ರವಾಗಿ ಗಾಯಗೊಂಡಿದ್ದಾರೆ.


ಕೆ.ಎ51 ಎನ್5679 ನೋಂದಣಿ ಸಂಖ್ಯೆಯ ಕಾರಿನಲ್ಲಿ ಅಂಕೋಲಾ ಕಡೆಯಿಂದ ಕುಮಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ನಿಯಂತ್ರಣ ಕಳೆದುಕೊಂಡು ಡಿವೈಡರಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಮೃತ ಯುವತಿ ಅಮೆರಿಕಾದಲ್ಲಿ ಐಟಿ ಕಂಪನಿಯೊಂದರ ಉದ್ಯೋಗಿ ಎಂದು ತಿಳಿದು ಬಂದಿದೆ.

ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Must Read