Sunday, December 21, 2025

ಕೊಹ್ಲಿ – ರೋಹಿತ್ ಜೇಬಿಗೆ ಬೀಳುತ್ತಾ ಕತ್ತರಿ? ಏನಿದೆ ಬಿಸಿಸಿಐ ಪ್ಲಾನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಇಬ್ಬರು ಲೆಜೆಂಡರಿ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಆಡುತ್ತಿರುವ ಇವರಿಬ್ಬರ ವಾರ್ಷಿಕ ವೇತನಕ್ಕೆ ಕತ್ತರಿ ಹಾಕುವ ಯೋಚನೆಯಲ್ಲಿ ಬಿಸಿಸಿಐ ಇದೆ ಎಂದು ವರದಿಯಾಗಿದೆ.

ಮುಂಬರುವ ದಿನಗಳಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ವಾರ್ಷಿಕ ವೇತನ ಕಡಿಮೆಯಾಗುವ ಸಾಧ್ಯತೆ ಇದೆ. ಇವರಿಬ್ಬರಿಗೆ ಮೊದಲಿಗಿಂತ 2 ರೂ. ಕೋಟಿ ಕಡಿಮೆ ವೇತನ ಸಿಗಬಹುದು.

ವಾಸ್ತವವಾಗಿ ಡಿಸೆಂಬರ್ 22 ರಂದು ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌ನ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಆಟಗಾರರ ಒಪ್ಪಂದಗಳು ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಮಹಿಳಾ ಕ್ರಿಕೆಟಿಗರ ಒಪ್ಪಂದಗಳನ್ನು ಪರಿಷ್ಕರಿಸಲಾಗುವುದು.

ಪಿಟಿಐ ವರದಿಯ ಪ್ರಕಾರ, ಬಿಸಿಸಿಐ ಅಪೆಕ್ಸ್ ಕೌನ್ಸಿಲ್‌ನ ಸಾಮಾನ್ಯ ಸಭೆ ಆನ್‌ಲೈನ್‌ನಲ್ಲಿ ನಡೆಯಲಿದ್ದು, ಟೆಸ್ಟ್ ಮತ್ತು ಟಿ20ಯಿಂದ ನಿವೃತ್ತರಾಗಿರುವ ರೋಹಿತ್ ಮತ್ತು ವಿರಾಟ್ ಅವರನ್ನು ಎ+ ದರ್ಜೆಯಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಎ ದರ್ಜೆಗೆ ಇಳಿಸಬೇಕೇ ಎಂಬ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ.

BCCI ಕೇಂದ್ರ ಒಪ್ಪಂದದಡಿಯಲ್ಲಿ, A+ ದರ್ಜೆಯ ಆಟಗಾರರು ವಾರ್ಷಿಕ 7 ಕೋಟಿ ರೂ. ವೇತನವನ್ನು ಪಡೆಯುತ್ತಾರೆ. ಇದು ಪ್ರಸ್ತುತ ರೋಹಿತ್ ಮತ್ತು ವಿರಾಟ್ ಅವರ ವೇತನವಾಗಿದೆ. ಆದಾಗ್ಯೂ, ಪರಿಷ್ಕರಣೆಯ ನಂತರ ಅವರಿಗೆ A ದರ್ಜೆಗೆ ಹಿಂಬಡ್ತಿ ನೀಡಿದರೆ, ಅವರ ವೇತನವು 5 ಕೋಟಿ ರೂ.ಗೆ ಇಳಿಯಲಿದೆ.

ಶುಭ್​ಮನ್ ಗಿಲ್ ಅವರಿಗೆ ಗ್ರೇಡ್ ಬಡ್ತಿ ಸಿಗಬಹುದು. ಗಿಲ್ ಮೂರು ಸ್ವರೂಪಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಾರೆ ಮತ್ತು ಪ್ರಸ್ತುತ ಬಿಸಿಸಿಐನ ಕೇಂದ್ರ ಒಪ್ಪಂದದಡಿಯಲ್ಲಿ ಎ ಗ್ರೇಡ್‌ನಲ್ಲಿದ್ದಾರೆ. ಆದಾಗ್ಯೂ, ಡಿಸೆಂಬರ್ 22 ರಂದು ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಅವರ ಗ್ರೇಡ್ ಹೆಚ್ಚಳವನ್ನು ಪರಿಷ್ಕರಿಸುವ ಸಾಧ್ಯತೆಗಳಿವೆ. ಇದರರ್ಥ ಅವರನ್ನು ಎ ಗ್ರೇಡ್‌ನಿಂದ ಎ+ ಗ್ರೇಡ್‌ಗೆ ಬಡ್ತಿ ನೀಡಬಹುದು.

error: Content is protected !!