Friday, December 12, 2025

ದಿನಭವಿಷ್ಯ: ಚಿಂತನೆ ಉತ್ತುಂಗ, ಕಾರ್ಯದಲ್ಲಿ ನಿಧಾನ.. ಭಾವನಾತ್ಮಕ ಸಮತೋಲನ ಅಗತ್ಯ

ಮೇಷ
ನಿಮ್ಮ ಬದುಕಿನ ಮೇಲೆ ತಕ್ಷಣ ಪರಿಣಾಮ ಬೀರಬಲ್ಲ ವಿಷಯದತ್ತ ಹೆಚ್ಚು ಗಮನ ಹರಿಸಿ. ಅನ್ಯರ ಟೀಕೆ ಕೇಳುವಿರಿ. ಕೌಟುಂಬಿಕ ಸಾಮರಸ್ಯ.
ವೃಷಭ
ಅಸೂಯೆ ನೆಮ್ಮದಿ ಕೆಡಿಸಬಲ್ಲುದು. ಅನ್ಯರ ಏಳಿಗೆಗೆ ಮತ್ಸರ ಪಡಬೇಡಿ. ಮನಸ್ಸು ಕೆಡಿಸುವ ಯೋಚನೆ ಮಾಡಲು ಹೋಗಬೇಡಿ.
ಮಿಥುನ
ಯಾವುದೋ ವಿಚಾರ ಬೇಸರ ಸೃಷ್ಟಿಸಲಿದೆ. ಅದನ್ನು ನಿವಾರಿಸಲು ಯತ್ನಿಸಿ. ನಿಮ್ಮನ್ನು ಪೂರ್ಣವಾಗಿ ಅರಿತವರ ನೆರವು ಪಡೆಯಿರಿ. ಧನವ್ಯಯ.
ಕಟಕ
ಶುಭ ಸಂಕೇತ ಇಂದು ತೋರಿ ಬರಲಿದೆ. ಸದ್ಯದಲ್ಲೆ ನಿಮ್ಮ ಚಿಂತೆ ಯೊಂದು ಪರಿಹಾರ ಕಾಣಲಿದೆ. ಉನ್ನತಿಗೆ ಪೂರಕ ಸನ್ನಿವೇಶ ಸೃಷ್ಟಿ.
ಸಿಂಹ
ವಿವಾದದಿಂದ ದೂರವಿರಿ. ನೀವು ಬಯಸದಿದ್ದರೂ ಕೆಲವರು ತಮ್ಮ ಬಿಕ್ಕಟ್ಟಿನಲ್ಲಿ ನಿಮ್ಮನ್ನು ಎಳೆಯಬಹುದು. ಮಾನಸಿಕ ಒತ್ತಡ ಅಽಕ.
ಕನ್ಯಾ
ಯಾವುದೇ ಕೊರತೆ ಇಂದು ಬಾಽಸದು. ನೀವು ಇಚ್ಛಿಸಿದಂತೆ ಆಗಲಿದೆ. ಆದರೂ ನಿಮ್ಮಲ್ಲಿ ಅಸಂತೃಪ್ತಿ. ಹೇಳಲಾಗದ ಬೇಸರ ಕಾಡುವುದು.
ತುಲಾ
ನೀವು ಉದ್ದೇಶಿಸಿದ ಕಾರ್ಯ ಇಂದು ಸಾಧ್ಯ ಆಗದಿರಬಹುದು. ಹತಾಶೆ ಬೇಡ, ನಾಳೆಯೆಂಬುದು ಇದ್ದೇ ಇದೆ. ಮರಳಿ ಪ್ರಯತ್ನವ ಮಾಡಿರಿ.
ವೃಶ್ಚಿಕ
ವೃತ್ತಿಯಲ್ಲಿ ಎಲ್ಲ ಸುಸೂತ್ರ. ಮೇಲಿನವರ ಪ್ರಶಂಸೆ. ಕೆಲ ವಿಷಯದಲ್ಲಿ ಅತೃಪ್ತಿ ಇದ್ದರೂ ಇಂದು ಖುಷಿಯಿಂದ ಕಳೆಯಿರಿ. ದೂರದ ಬಂದು ಭೇಟಿ.
ಧನು
ಸಂವಹನ ಕಲೆ ನಿಮಗೆ ಕರಗತ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಯಾವುದೇ ಪರಿಸ್ಥಿತಿ ನಿಭಾಯಿಸಲು ಶಕ್ತರಾಗುವಿರಿ.
ಮಕರ
ಒತ್ತಡದ ದಿನ. ಬಯಸಿದ ಕಾರ್ಯ ಕೈತಪ್ಪಿ ಹೋದೀತು. ಸಂಬಂಧದಲ್ಲಿ ಋಣಾತ್ಮಕ ಚಿಂತನೆ ನುಸುಳಬಹುದು. ಧನವ್ಯಯ ಅಽಕ.
ಕುಂಭ
ವೃತ್ತಿಯಲ್ಲಿ ಕೆಲವು ಅನುಚಿತ ಬೆಳವಣಿಗೆ ಸಂಭವ. ಆರೋಗ್ಯದ ಬಗ್ಗೆ ಗಮನ ಕೊಡಿ. ಅತಿಯಾಗಿ ಸಿಹಿ ಪದಾರ್ಥ ಸೇವಿಸದಿರಿ.
ಮೀನ
ಸಣ್ಣದೆಂದು ಭಾವಿಸಿದ ಸಮಸ್ಯೆ ದೊಡ್ಡದಾಗಿ ಕಾಡೀತು. ಅದಕ್ಕೆ ಅವಕಾಶ ಕೊಡದಿರಿ. ಆತ್ಮೀಯರ ವಿರೋಧ ಕಟ್ಟಿಕೊಳ್ಳದಿರಿ.

error: Content is protected !!