ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸೋಮವಾರ ಬಿಡುಗಡೆಯಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿದ್ದು, ಒಂದೇ ದಿನದಲ್ಲಿ 918 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟಾರೆ ಸಕ್ರಿಯ ಪ್ರಕರಣಗಳು 6,350 ಕ್ಕೆ ಏರಿದೆ.
ದೇಶದದಲ್ಲಿ ಕೋವಿಡ್ -19 ಸಾವಿನ ಸಂಖ್ಯೆ 5,30,806 ಕ್ಕೆ ಏರಿದ್ದು, ಇತ್ತೀಚೆಗೆ ನಾಲ್ಕು ಸಾವುಗಳು ಸಂಭವಿಸಿವೆ. ರಾಜಸ್ಥಾನದಿಂದ ಎರಡು , ಕರ್ನಾಟಕದಿಂದ ಒಂದು ಮತ್ತು ಒಂದು ಸಾವಿನ ಪ್ರಕರಣವು ಕೇರಳದಲ್ಲಿ ಪತ್ತೆಯಾಗಿದೆ.