ಹೊಸದಿಗಂತ ವರದಿ ಶಿವಮೊಗ್ಗ:
ಜಿಲ್ಲಾಧಿಕಾರಿ ಕಚೇರಿ ಮುಂದೆ ಆಜಾನ್ ಕೂಗಿ ಸಂವಿಧಾನ ವಿರೋಧಿ ಕೃತ್ಯವೆಸಗಿದ ಯುವಕನನ್ನು ಬಂಧಿಸುವಂತೆ ಆಗ್ರಹಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷದ್ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಸಂವಿಧಾನವನ್ನು ಪಾಲನೆ ಮಾಡುವ ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಆಜಾನ್ ಕೂಗಿ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಪ್ರತಿಭಟನಾ ನಿರತ ಮುಸಲ್ಮಾನ್ ಸಂಘಟನೆಗಳು ಸಾಬೀತು ಮಾಡಿವೆ. ಅಂತಹ ಕೃತ್ಯವೆಸಗಿದವರ ಮೇಲೆ ಕಠಿಣ ಕೇಸು ದಾಖಲಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಆಜಾನ್ ಕೂಗಿದ ಸ್ಥಳವನ್ನು ಗೋಮೂತ್ರದಿಂದ ಶುದ್ಧೀಕರಣ ಮಾಡಲು ಮುಂದಾಗಿದ್ದು, ಇದಕ್ಕೆ ಪೊಲೀಸರು ಆಸ್ಪದ ನೀಡಲಿಲ್ಲ. ಪ್ರತಿಭಟನೆಯಲ್ಲಿ ವಿಹೆಚ್‌ಪಿಯ ಜಿಲ್ಲಾಧ್ಯಕ್ಷ ವಾಸುದೇವ್, ಪ್ರಮುಖರಾದ ದೀನ್ ದಯಾಳು, ನಾಗೇಶ್, ರಾಜೇಶ್ ಗೌಡ, ಅಂಕುಶ್, ರಮೇಶ್ ಬಾಬು ಮೊದಲಾದವರು ಇದ್ದರು.