ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬೆಂಗಳೂರಿನ ಶೋಭಾ ಡೆವಲಪರ್ಸ್ ಕೇಂದ್ರ ಕಚೇರಿ ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಕಚೇರಿಗಳ ಮೇಲೆ ಐಟಿ ದಾಳಿಯಾಗಿದೆ.
ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಚೆನ್ನೈ ವಿಭಾಗದ ಐಟಿ(IT) ಅಧಿಕಾರಿಗಳು ದಾಳಿ ಮಾಡಿದ್ದಾರೆ.”
ಇಂದು(ಮಾರ್ಚ್ 20) ವೈಟ್ ಫೀಲ್ಡ್ ರಸ್ತೆಯ ಹೂಡಿ, ಬನ್ನೇರುಘಟ್ಟ ರಸ್ತೆಯ ಅರಕೆರೆ ಬಳಿಯ ಕಚೇರಿಗಳ ಮೇಲೆ ಸುಮಾರು 50 ವಾಹನಗಳಲ್ಲಿ ಹತ್ತು ಅಧಿಕಾರಿಗಳನ್ನೊಳಗೊಂಡ ಐದು ತಂಡಗಳಿಂದ ಏಕಕಾಲಕ್ಕೆ ದಾಳಿಯಾಗಿದ್ದು, ಅಧಿಕಾರಿಗಳು ಕಡತಗಳನ್ನ ಪರಿಶೀಲನೆ ನಡೆಸಿದ್ದಾರೆ .
ಐಟಿ ದಾಳಿ ಹಿನ್ನಲೆ ಶೋಬಾ ಡೆವಲಪರ್ಸ್ ಮುಖ್ಯ ಕಚೇರಿಯಲ್ಲಿ ಇಂದಿನ ಕೆಲಸ ಸಂಪೂರ್ಣ ಸ್ಥಗಿತ ಮಾಡಲಾಗಿದೆ. ಯಾವುದೇ ನೌಕರರನ್ನ ಹೊರಗೆ ಹೋಗದಂತೆ ಐಟಿ ಅಧಿಕಾರಿಗಳು ಸೂಚಿಸಿದ್ದಾರೆ. ಅದರಂತೆ ಎಲ್ಲ ನೌಕರರನ್ನ ಕಚೇರಿ ಅವರಣದಲ್ಲೆ ಸ್ಥಳೀಯ ಪೊಲೀಸರು ಇರಿಸಿದ್ದಾರೆ.