ಕೋವಿಡ್‌ಗೆ ಬೆಚ್ಚಿಬಿದ್ದ ‘ಮಹಾ’ರಾಷ್ಟ್ರ: ಹೆಚ್ಚಳವಾಗುತ್ತಿದೆ ಕೇಸ್‌ಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಆರ್ಭಟಕ್ಕೆ ಮಹಾರಾಷ್ಟ್ರ ಬೆಚ್ಚಿಬಿದ್ದಿದ್ದು, ಬುಧವಾರ ಒಂದೇ ದಿನ ಬರೋಬ್ಬರಿ 280 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕೋವಿಡ್‌ಗೆ ಇಂದು ಒಬ್ಬರನ್ನು ಬಲಿ ಪಡೆದಿದೆ.
ಸಧ್ಯ ಪರೀಕ್ಷಾ ಸಂಖ್ಯೆ ಕಡಿಮೆಯಿದ್ದು, ಪರೀಕ್ಷೆ ಹೆಚ್ಚಿಸಿದಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳು ವರದಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.
ಮಹಾರಾಷ್ಟ್ರದಲ್ಲಿ ಸಧ್ಯ ಸೋಂಕಿತರ ಒಟ್ಟು ಸಂಖ್ಯೆ 8140145ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 7845 ಸ್ವ್ಯಾಬ್ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ ಪುಣೆ ವಲಯದಲ್ಲಿ 133, ಮುಂಬೈನಲ್ಲಿ 101, ನಾಸಿಕ್‌ನಲ್ಲಿ 14 ಮತ್ತು ಕೊಲ್ಲಾಪುರದಲ್ಲಿ 10 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದಲ್ಲದೆ ರಾಷ್ಟ್ರ ಮಟ್ಟದಲ್ಲಿಯೂ ಕೋವಿಡ್ ಕೇಸ್ ಸಂಖ್ಯೆ ಏರಿಕೆಯಾಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!