ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಇದೀಗ ಭಾರತದ ಬಹುಬೇಡಿಕೆಯ ನಟಿಯಾಗಿದ್ದಾರೆ. ಕನ್ನಡ ಚಿತ್ರರಂಗದಿಂದ ಜರ್ನಿ ಆರಂಭಿಸಿದ ರಶ್ಮಿಕಾ ತೆಲುಗಿನಲ್ಲಿ ಸದ್ದು ಮಾಡಿದ್ದು, ಇದೀಗ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ನಿಮ್ಮ ತಂದೆತಾಯಿಗೆ ನಿಮ್ಮ ನಟನೆ ಬಗ್ಗೆ ಹೆಮ್ಮೆ ಇದೆಯಾ ಎಂದು ಸಂದರ್ಶನದಲ್ಲಿ ಪ್ರಶ್ನೆಯೊಂದು ಎದುರಾಗಿದೆ. ಇದಕ್ಕೆ ರಶ್ಮಿಕಾ ನನ್ನ ತಂದೆ ತಾಯಿಗೆ ಸಿನಿಮಾ ಫೀಲ್ಡ್ ಬಗ್ಗೆ ಏನೂ ಗೊತ್ತಿಲ್ಲ. ಅವರಿಗೆ ನಾನು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಇಲ್ಲ, ಅವಾರ್ಡ್ ಪಡೆದಾಗ ಖುಷಿ ಪಡುತ್ತಾರೆ. ಅವರಿಗೆ ಹೆಮ್ಮೆಯಾಗಬೇಕಾದರೆ ನಾನು ಇನ್ನಷ್ಟು ಬೆಳೀಬೇಕು ಎಂದಿದ್ದಾರೆ.