ಒಡಿಶಾ ಸಿಎಂ ಭೇಟಿಯಾದ ಮಮತಾ ಬ್ಯಾನರ್ಜಿ: ಮೈತ್ರಿ ಮಾಡಿಕೊಳ್ತಾರಾ ಪಟ್ನಾಯಕ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಗುರುವಾರ ರಾತ್ರಿ ಭೇಟಿಯಾಗಿದ್ದಾರೆ. ಇನ್ನೂ ಮೂರು ದಿನಗಳ ಕಾಲ ಒಡಿಸ್ಸಾದಲ್ಲಿರುವ ದೀದಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಟ್ನಾಯಕ್ ಅವರೊಂದಿಗೆ ವಿಶೇಷ ಚರ್ಚೆ ನಡೆಸಲಿದ್ದಾರೆ. ಇದರ ನಡುವೆ ಮೂರು ದಿನಗಳ ಹಿಂದೆಷ್ಟೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಜೊತೆ ಮಮತಾ ಮೈತ್ರಿ ಮಾಡಿಕೊಂಡಿದ್ದರು. ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ರಚನೆಯಾಗುತ್ತಿರುವ ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಥಾನ ನೀಡಿಲ್ಲ. ಕಾಂಗ್ರೆಸ್ ರಹಿತ ರಂಗ ರಚಿಸುವುದಾಗಿಯೂ ಘೋಷಿಸಿದರು.‌

ಮಮತಾ ಮತ್ತು ಅಖಿಲೇಶ್ ರಚಿಸಿರುವ ಈ ರಂಗಕ್ಕೆ ಪಟ್ನಾಯಕ್ ಸೇರುತ್ತಾರಾ ಎಂಬುದು ಚರ್ಚೆಯ ವಿಷಯವಾಗಿದೆ. ಒಡಿಶಾಗೆ ಬಂದಿರುವ ಮಮತಾ ಅವರ ಉದ್ದೇಶ ಸ್ಪಷ್ಟವಾಗಿ ಗೊತ್ತಿದ್ದರೂ, ಯಾವುದೇ ಪಕ್ಷದಿಂದ ದೂರವೂ ಇಲ್ಲದ, ಯಾವುದೇ ಪಕ್ಷಕ್ಕೂ ಹತ್ತಿರವಾಗದ ನವೀನ್ ಪಟ್ನಾಯಕ್ ಅವರು ಮಮತಾ ಮೈತ್ರಿಕೂಟಕ್ಕೆ ಸೇರುತ್ತಾರೆ ಎಂದು ಖಚಿತವಾಗಿ ಹೇಳಲಾಗದು ಅಂತಿವೆ ರಾಜಕೀಯ ವಲಯ. ಬಿಹಾರದ ಮುಖ್ಯಮಂತ್ರಿ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ಮೈತ್ರಿಗೆ ಸಿದ್ಧತೆಗಳು ನಡೆಯುತ್ತಿದ್ದರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಮೈತ್ರಿ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರೆ. ಇವರ ನಡುವೆ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಕೂಡ ಆ ಪ್ರಯತ್ನಗಳಲ್ಲಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಅಲ್ಲ, ದೇಶದ ಪ್ರತಿಪಕ್ಷಗಳ ಜೊತೆಗೂಡಿ ರಂಗ ರಚಿಸುವುದಾಗಿ ಹಲವು ಬಾರಿ ಕೆಸಿಆರ್‌ ಘೋಷಿಸಿದ್ದಾರೆ. ಮಮತಾ ಬ್ಯಾನರ್ಜಿ ಕೂಡ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಬದಿಗಿಟ್ಟರು. ಕೇಜ್ರಿವಾಲ್ ಕೂಡ ಆ ಎರಡು ಪಕ್ಷಗಳ ಕಡೆಗೆ ಹೋಗುವ ಸಾಧ್ಯತೆ ಕಾಣುತ್ತಿಲ್ಲ. ನಿತೀಶ್ ಮಾತ್ರ ಸ್ವಲ್ಪಮಟ್ಟಿಗೆ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಆದರೆ, ಅವರೂ ಸಂಪೂರ್ಣವಾಗಿ ಅದರ ಪರವಾಗಿಲ್ಲ ಎಂದು ತೋರುತ್ತಿದೆ. ಈ ಹಿನ್ನಲೆಯಲ್ಲಿ ನವೀನ್ ಪಟ್ನಾಯಕ್ ಅವರ ಹೆಜ್ಜೆಗಳು ಯಾವ ಕಡೆಗೆ ಎಂಬುದು ಕುತೂಹಲ ಮೂಡಿಸಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ಒಡಿಶಾವನ್ನು ಆಳಿದ ಒಡಿಶಾದ ಪ್ರಬಲ ನಾಯಕರಲ್ಲಿ ಒಬ್ಬರು. ಅವರನ್ನು ಮುಂಚೂಣಿಗೆ ತೆಗೆದುಕೊಂಡರೆ, ಹತ್ತಕ್ಕೂ ಹೆಚ್ಚು ಸಂಸತ್ ಸ್ಥಾನಗಳು ಕೈಯಲ್ಲಿರಲಿವೆ. ಹಾಗಾಗಿಯೇ ಮುಂಚೂಣಿ ನಾಯಕರು ಒಡಿಶಾದತ್ತ ಮುಖ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!