Monday, December 15, 2025

ಕಥೆಯೊಂದ ಹೇಳುವೆ 11 | ಪ್ರಶ್ನೆಯಲ್ಲೇ ಉತ್ತರವಿರುತ್ತೆ, ನಾವು ಯೋಚ್ನೆ ಮಾಡೋದನ್ನು ಸ್ವಲ್ಪ ಚೇಂಜ್ ಮಾಡ್ಕೋಬೇಕು ಅಷ್ಟೇ!

ಅವನ ಕೈ ಚಳಕವೇ ಹಾಗಿತ್ತು. ಯಾವುದೇ ಕಷ್ಟದ ಬಿಗ ಇದ್ರು ಅದನ್ನು ಕ್ಷಣಮಾತ್ರದಲ್ಲಿ ತೆಗೆದು ಬಿಡುತ್ತಿದ್ದ. ಇದೆ ಕೆಲಸ ಅವನಲ್ಲಿ ಅಹಂಕಾರ ಬೆಳೆಯೋಕೆ ಶುರುವಾಯ್ತು. ಆಗ ಅವನ ಅಪ್ಪ ಅವನಿಗೊಂದು ಚಾಲೆಂಜ್ ಕೊಡ್ತಾನೆ.

ಅವನನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ‘ ಈ ನೇತಾಡುತ್ತಿರೋ ಗೂಡಿನ ಒಳಗಡೆ ನಿನ್ನನ್ನು ಹಾಕ್ತೇನೆ, ನೀನು ಒಳಗಡೆಯಿಂದ ಈ ಬೀಗವನ್ನು ತೆಗೀಬೇಕು ಅದು ಕೂಡ ಆ ಗೂಡು ನೆಲದ ಮೇಲೆ ಬೀಳೋ ಮುಂಚೆ. ಹಾಗೇನಾದ್ರೂ ನೀನು ಮಾಡಿಲ್ಲಾಂದ್ರೆ ಈ ಚಾಲೆಂಜ್ ನಲ್ಲಿ ನೀನು ಸೋತೆ ಅಂತ ಅರ್ಥ’ ಎಂದು ಹೇಳುತ್ತಾನೆ.

ಅವನು ತುಂಬಾ ಫೋಕಸ್ ಮಾಡಿಕೊಂಡು ಬಿಗ ತೆಗೆಯೋಕೆ ಶುರು ಮಾಡುತ್ತಾನೆ. ಆದ್ರೆ ಅವನಿಗೆ ಆಗೋದೇ ಇಲ್ಲ.. ಸ್ವಲ್ಪ ಟ್ರೈ ಮಾಡೋ ಅಷ್ಟೊತ್ತಿಗೆ ಗೂಡು ನೆಲದ ಮೇಲೆ ಬಂದಿರುತ್ತೆ. ಅವನಿಗೆ ಕೋಪ ಬಂದು ಬಾಗಿಲನ್ನು ಕಾಲಿನಿಂದ ಒದ್ದು ಬಿಡುತ್ತಾನೆ. ಬಾಗಿಲು ಓಪನ್ ಆಗಿ ಬಿಡುತ್ತೆ.

ಆಗ ಆ ಯುವಕ ಅಲ್ಲೇ ನಿಂತಿದ್ದ ಅಪ್ಪನ ಮುಖ ನೋಡ್ತಾನೆ. ಅಪ್ಪ ಹೇಳ್ತಾರೆ ‘ಆ ಗೂಡಿನ ಬಾಗಿಲು ಮೊದಲೇ ತೆರೆದಿತ್ತು. ನೀನು ಬಾಗಿಲು ತೆರೆಯದೆ ಇರೋದಕ್ಕೆ ಆ ಗೂಡು ಕಾರಣವಲ್ಲ, ನಿನ್ನ ನಂಬಿಕೆ. ನೀನು ಯಾವಾಗ್ಲೂ ತಪ್ಪು ಆಗೋಕೆ ಸಾಧ್ಯ ಇಲ್ಲ ಅನ್ನೋ ನಂಬಿಕೆ. ನಿಂಗ ಈ ಪ್ರಶ್ನೆಯಲ್ಲೇ ಉತ್ತರವಿತ್ತು ತಾನೇ? ಅಂದಾಗ ಯುವಕ ಹೌದು ಎನ್ನುವಂತೆ ತಲೆ ಆಡಿಸುತ್ತಾನೆ.

ಈ ಕಥೆಯಲ್ಲಿ ಪ್ರತಿಯೊಂದು ಸಮಸ್ಯೆಗೂ ಒಂದೇ ಉತ್ತರ ಅಲ್ಲ. ನಾವು ಒಂದು ಸಮಸ್ಯೆಯನ್ನು ಒಂದೇ ರೀತಿ ನೋಡೋದನ್ನು ಬಿಟ್ಟು, ಸ್ವಲ್ಪ ಶಾಂತವಾಗಿ ಇನ್ನೊಂದು ರೀತಿಯಲ್ಲಿ ಯೋಚನೆ ಮಾಡಿ ನೋಡಿದ್ರೆ ಸಮಸ್ಯೆಗಳು ಕೂಡ ಸರಳವಾಗಿ ಕಾಣುತ್ತೆ.

error: Content is protected !!