ಸಿಧು ಮೂಸೆವಾಲಾ ತಂದೆಗೆ ಜೀವ ಬೆದರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಪಂಜಾಬಿ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಅವರಿಗೆ ಇಮೇಲ್ ಮೂಲಕ ಮತ್ತೊಮ್ಮೆ ಜೀವ ಬೆದರಿಕೆ ಬಂದಿದೆ.

“ನನ್ನನ್ನು ಶೀಘ್ರದಲ್ಲೇ ಕೊಲ್ಲಲಾಗುವುದು ಎಂದು ರಾಜಸ್ಥಾನದಿಂದ ನನಗೆ ಇಮೇಲ್‌ನಲ್ಲಿ ಬೆದರಿಕೆಗಳು ಬಂದಿವೆ” ಎಂದು ಮೂಸೆವಾಲಾ ತಂದೆ ಹೇಳಿದ್ದಾರೆ.

ಈ ಹಿಂದೆಯೂ ಸಹ ತನಗೆ ಬೆದರಿಕೆ ಹಾಕಲಾಗಿದೆ ಎಂದು ಬಲ್ಕೌರ್ ಸಿಂಗ್ ಆರೋಪಿಸಿದ್ದರು.

28ರ ಹರೆಯದ ಸಿಧು ಮೂಸೆವಾಲಾ ಅವರನ್ನು ಕಳೆದ ವರ್ಷ ಮೇ 29 ರಂದು ಮಾನ್ಸಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಪಂಜಾಬ್ ಪೊಲೀಸರು ಮೂಸೆವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಹಿಂತೆಗೆದುಕೊಂಡ ಎರಡು ದಿನಗಳ ನಂತರ ಈ ಘಟನೆ ನಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!