ಭಾರತದಲ್ಲಿ ಉದ್ಯೋಗ ಕಡಿತ: 82 ಸ್ಟಾರ್ಟಪ್‌ಗಳಲ್ಲಿ ವಜಾಗೊಂಡಿದ್ದಾರೆ 23 ಸಾವಿರ ಟೆಕ್ಕಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರ್ಥಿಕ ಹಿಂಜರಿತದ ಭಯದ ನಡುವೆ ವಜಾಗೊಳಿಸುವಿಕೆಗಳು ತೀವ್ರಗೊಳ್ಳುತ್ತಲೇ ಇದ್ದು ಭಾರತದಲ್ಲಿ 82 ಸ್ಟಾರ್ಟ್‌ಅಪ್‌ಗಳಿಂದ 23,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಈ ಪಟ್ಟಿಯು ಬೆಳೆಯುತ್ತಲೇ ಇದ್ದು ಇನ್ನಷ್ಟು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ.

Inc42 ಪ್ರಕಟಿಸಿದ ವರದಿಯ ಪ್ರಕಾರ, ನಾಲ್ಕು ಯುನಿಕಾರ್ನ್‌ಗಳು ಸೇರಿದಂತೆ 19 edtech ಸ್ಟಾರ್ಟ್‌ಅಪ್‌ಗಳು ಇಲ್ಲಿಯವರೆಗೆ 8,460 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ. BYJU’S, Ola, OYO, Meesho, MPL, LivSpace, Innovaccer, Udaan, Uncademy ಮತ್ತು Vedantu, ಸೇರಿದಂತೆ ಭಾರತದ ಪ್ರಮುಖ ನವೋದ್ದಿಮೆಗಳ ಪಾಲು ಈ ಉದ್ಯೋಗ ಕಡಿತದಲ್ಲಿ ಹೆಚ್ಚಿದೆ.

ಮನೆಯ ಒಳಾಂಗಣ ಮತ್ತು ನವೀಕರಣ ಮಾಡುವ ಲಿವ್‌ಸ್ಪೇಸ್ ಈ ವಾರ ವೆಚ್ಚ ಕಡಿತ ಕ್ರಮಗಳ ಭಾಗವಾಗಿ ಕನಿಷ್ಠ 100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಆನ್‌ಲೈನ್‌ ಸಗಟು ವ್ಯಾಪಾರಿ ವೇದಿಕೆ ದುಕಾನ್‌ ಕಳೆದವಾರ 30ಶೇ.ಉದ್ಯೋಗಿಗಳನ್ನು ಹೊರಹಾಕಿದ್ದು ಆರು ತಿಂಗಳಲ್ಲಿ ಎರಡು ಬಾರಿ ಕಡಿತ ನಡೆಸಿದೆ.
ಹೆಲ್ತ್‌ಕೇರ್ ಯುನಿಕಾರ್ನ್ ಪ್ರಿಸ್ಟಿನ್ ಕೇರ್ 350 ಉದ್ಯೋಗಿಗಳನ್ನು ವಜಾಗೊಳಿಸಿದೆ. ಆನ್‌ಲೈನ್ ಉನ್ನತ ಶಿಕ್ಷಣ ಕಂಪನಿ ಅಪ್‌ಗ್ರಾಡ್ ತನ್ನ ಅಂಗಸಂಸ್ಥೆ “ಕ್ಯಾಂಪಸ್” ನಲ್ಲಿ ಸುಮಾರು 30 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಹೀಗೆ ಭಾರತದ ನವೋದ್ದಿಮೆಗಳಾದ್ಯಂತ ಉದ್ಯೋಗ ಕಡಿತಗಳು ಹೆಚ್ಚುತ್ತಿವೆ ಎಂದು ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!