ಕಳ್ಳರನ್ನು ಕಳ್ಳ ಎಂದು ಕರೆಯುವ ಹಕ್ಕು ಇಲ್ವಾ?: ಮಾಜಿ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಹುಲ್​ ಗಾಂಧಿ ಆವರನ್ನು ಸಂಸತ್​ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ಕಾಂಗ್ರೆಸ್​ ಪಕ್ಷವು ದೇಶಾದ್ಯಂತ ಇಂದು ಸಂಕಲ್ಪ ಸತ್ಯಾಗ್ರಹವನ್ನ ಹಮ್ಮಿಕೊಂಡಿದೆ.

ಬೆಂಗಳೂರು ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಕಳ್ಳರನ್ನು ಕಳ್ಳ ಎಂದು ಕರೆಯುವ ಹಕ್ಕು ಇಲ್ವಾ ಎಂದು ಪ್ರಶ್ನಿಸಿದ್ದಾರೆ.

ಇದು ಹಿಟ್ಲರ್​ನ ಜರ್ಮನಿ, ಮುಸೊಲಿನಿಯ ಇಟಲಿ ದೇಶ ಅಲ್ಲ ಇದು ಭಾರತ. ಇಲ್ಲಿ ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿ ಹಿಡಿಯಲು ಪ್ರಬಲವಾದ ವಿರೋಧ ಪಕ್ಷ ಇರಬೇಕು ಆಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್​ ಗಾಂಧಿ ಅವರು ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ ಯಾವುದೇ ಕೆಟ್ಟ ಶಬ್ದ ಬಳಸಿಲ್ಲ. 2019ರಲ್ಲಿ ಕೆಜಿಎಫ್​ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ನಾನೂ ಕೂಡ ಇದ್ದೆ ಬ್ಯಾಂಕ್​ ಹಣ ಲೂಟಿ ಮಾಡಿ ಓಡಿಹೋಗಿರುವವರ ಪೈಕಿ ಮೋದಿ ಎಂಬುವವರ ಹೆಸರಿನ ವ್ಯಕ್ತಿಗಳೇ ಜಾಸ್ತಿ ಇದ್ದಾರೆ ಎಂದು ಹೇಳಿದ್ದರು.ಮೋದಿ ಉಪನಾಮವನ್ನ ಇಟ್ಟುಕೊಂಡಿರುವವರು ಕಳ್ಳರು ಎಂದು ಕರೆದಿದ್ದರು. ಇವರೆಲ್ಲರೂ ಬ್ಯಾಂಕುಗಳಿಗೆ ಟೋಪಿ ಹಾಕಿ ಜನರ ದುಡ್ಡನ್ನ ಲೂಟಿ ಮಾಡಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ. ಇಂತಹವರನ್ನ ಸಾಧು ಸಂತರು ಎಂದು ಕರೆಯಬೇಕಾ ಕಳ್ಳರನ್ನು ಕಳ್ಳ ಎಂದು ಕರೆಯಲು ಹಕ್ಕು ಇಲ್ವಾ ನಮಗೆ ಅಷ್ಟು ವಾಕ್​ ಸ್ವಾತಂತ್ರ್ಯ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಏಪ್ರಿಲ್​ 5ರಂದು ಕೋಲಾರದಲ್ಲಿ ದೊಡ್ಡ ರ್‍ಯಾಲಿ ಮಾಡುತ್ಥೇವೆ ಎಲ್ಲರೂ ಭಾಗಿಯಾಗುವ ಮೂಲಕ ರಾಹುಲ್​ ಗಾಂಧಿ ಬೆನ್ನಿಗೆ ನಿಲ್ಲಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂಕಲ್ಪ ಸತ್ಯಾಗ್ರಹದಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!