ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಿಸ್ ಓಪನ್ನ (Swiss Open) ಪುರುಷರ ಡಬಲ್ಸ್ ಫೈನಲ್ನಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy and Chirag Shetty)ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
ಇಂದು ಚೀನಾದ ರೆನ್ ಕ್ಸಿಯಾಂಗ್ ಯು ಮತ್ತು ತಾನ್ ಕಿಯಾಂಗ್ ಅವರನ್ನು ಸೋಲಿಸುವುದರೊಂದಿಗೆ ವರ್ಷದ ಮೊದಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಫೈನಲ್ನಲ್ಲಿ ಈ ಜೋಡಿ 21-19, 24-22 ನೇರ ಸೇಟ್ಗಳಿಂದ ಚೀನಾದ ಜೋಡಿಯನ್ನು ಸೋಲಿಸಿತು.
ಇದು ರಾಂಕಿರೆಡ್ಡಿ ಚಿರಾಗ್ ಶೆಟ್ಟಿಯ ಈ ವರ್ಷ ಮೊದಲ ಬಿಡಬ್ಲ್ಯುಎಫ್ ಡಬಲ್ಸ್ ಪ್ರಶಸ್ತಿಯಾಗಿದೆ. ಅಲ್ಲದೆ ಈ ಪ್ರಶಸ್ತಿಯೊಂದಿಗೆ ಈ ಜೋಡಿಯ ಪ್ರಶಸ್ತಿಗಳ ಸಂಖ್ಯೆ ಐದಕ್ಕೇರಿದೆ.