ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌದಿ ಅರೇಬಿಯಾದ ದೊರೆ ಹೈದರಾಬಾದ್ ನೆಹರು ಮೃಗಾಲಯಕ್ಕೆ ನೀಡಿದ್ದ ‘ಅಬ್ದುಲ್ಲಾ’ ಎಂಬ ಗಂಡು ಚಿತಾ ಹೃದಯಾಘಾತದಿಂದ ಮೃತಪಟ್ಟಿದೆ.
15 ವರ್ಷದ ಚಿತಾ ಕೆಲ ದಿನಗಳಿಂದ ಕಾಯಿಲೆಯಿಂದ ಬಳಲುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಹೃದಯಾಘಾತವಾಗಿ ಮೃತಪಟ್ಟಿದೆ ಎನ್ನಲಾಗಿದೆ.
2013 ರಲ್ಲಿ ಸೌದಿ ದೊರೆ ಮೊಹಮ್ಮದ್ ಅಲ್ ಸೌದ್ ಅವರು ಭಾರತ ಭೇಟಿ ವೇಳೆ ಹಿಬಾ ಎಂಬ ಒಂದು ಹೆಣ್ಣು ಚಿತಾ ಹಾಗೂ ಅಬ್ದುಲ್ಲಾ ಎಂಬ ಒಂದು ಗಂಡು ಚಿತಾವನ್ನು ಸ್ನೇಹಾರ್ಥವಾಗಿ ನೆಹರು ಮೃಗಾಲಯಕ್ಕೆ ನೀಡಿದ್ದರು.
2020 ರಲ್ಲಿ ಇದೇ ಮೃಗಾಲಯದಲ್ಲಿ ಹಿಬಾ ಚಿತಾ ಮೃತಪಟ್ಟಿತ್ತು.