Friday, December 12, 2025

FOOD | ತುಂಬಾನೇ ರುಚಿಯಾದ ಕ್ಯಾಪ್ಸಿಕಂ ದಹಿ ಮಸಾಲಾ! ನೀವೂ ಟ್ರೈ ಮಾಡಿ

ರಸಂಗೆ ಬದಲಿ ಆಗಿ ರೊಟ್ಟಿ, ಚಪಾತಿ ಮತ್ತು ರೈಸ್ ಜೊತೆಗೆ ಸೂಪರ್ ಕಾಂಬೋ ಆಗಿ ಸರ್ವ್ ಮಾಡಬಹುದಾದ ಖಾದ್ಯವೆಂದರೆ ಕ್ಯಾಪ್ಸಿಕಂ ದಹಿ ಮಸಾಲಾ. ಈ ರೆಸಿಪಿ ನಿಮ್ಮ ದಿನನಿತ್ಯದ ಊಟಕ್ಕೆ ಹೊಸ ಟ್ವಿಸ್ಟ್ ನೀಡೋದ್ರಲ್ಲಿ ಎರಡು ಮಾತಿಲ್ಲ.

ಬೇಕಾಗುವ ಸಾಮಗ್ರಿಗಳು:

ಕ್ಯಾಪ್ಸಿಕಂ – 2
ಈರುಳ್ಳಿ – 1
ಟೊಮೇಟೊ – 1
ಮೊಸರು – ½ ಕಪ್
ಹಸಿಮೆಣಸು – 2
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಅರಿಶಿನ – ¼ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೇಬಲ್ ಸ್ಪೂನ್
ಕೊತ್ತಂಬರಿ – ಸ್ವಲ್ಪ

ಮಾಡುವ ವಿಧಾನ:

ಬಾಣಲೆಯಲ್ಲಿ ಎಣ್ಣೆ, ಜೀರಿಗೆ, ಈರುಳ್ಳಿಯನ್ನು ಸೇರಿಸಿ ಗೋಲ್ಡನ್ ಬಣ್ಣ ಬರುವವರೆಗೆ ಹುರಿಯಿರಿ. ಈಗ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಟೊಮೇಟೊ ಸೇರಿಸಿ ಮೃದುವಾಗುವವರೆಗೆ ಬೇಯಿಸಿರಿ.

ಈಗ ಅರಿಶಿನ, ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕ್ಯಾಪ್ಸಿಕಂ ತುಂಡುಗಳನ್ನು ಹಾಕಿ 5–6 ನಿಮಿಷ ಸ್ವಲ್ಪ ಫ್ರೈ ಮಾಡಿ. ಈಗ ಗ್ಯಾಸ್ ಆಫ್ ಮಾಡಿ ಮೊಸರು ಸೇರಿಸಿ ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿದರೆ ರೆಡಿ.

error: Content is protected !!