April 18, 2026
Saturday, April 18, 2026
spot_img

Shocking | ತುಮಕೂರಲ್ಲಿ ಭೀಕರ ಅಗ್ನಿ ಅವಘಡ: ಹೊತ್ತಿ ಉರಿದ ಗೋಡೌನ್

ಹೊಸದಿಗಂತ ವರದಿ, ತುಮಕೂರು :

ನಗರದ ಕೈಗಾರಿಕಾ ಪ್ರದೇಶವಾದ ವಸಂತ ನರಸಾಪುರದ ಬಳಿ ಗೋಡೌನ್ ಒಂದಕ್ಕೆ ಬೆಂಕಿ ಬಿದ್ದು ಗಂಟೆಗಳ ಕಾಲ ಹೊತ್ತಿ ಉರಿದ ಘಟನೆ ನಡೆದಿದೆ.

ಇಂಡಿಯನ್ ಸ್ಟೀಲ್ ಕಂಪನಿಯ ಮಾಲಿಕತ್ವದ ಗೋಡೌನ್ ನಲ್ಲಿ ಇದ್ದಂತಹ ವೇಸ್ಟ್ ಆಯಿಲ್ ಮತ್ತು ಗುಜರಿ‌ ಸಾಮನು ದಾಸ್ತಾನು ಮಾಡಿದ್ದ ಗೋಡನ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ ಯಾವುದೇ ತೊಂದರೆಯಾಗಿಲ್ಲ.

ದಿಲ್ಲಿ ಮೂಲದ ಕೈಗಾರಿಕೋದ್ಯಮಿ ಆರ್ ಕೆ ಇಂಪ್ರೆಷನ್ ಮಾಲೀಕತ್ವದ ಗೋದಾಮು ಇದಾಗಿದ್ದು, ಗೋದಾಮಿಗೆ ಭಾನುವಾರ ರಜೆ ಇದ್ದ ಕಾರಣ‌ ಯಾವುದೇ ಸಾವು ನೋವು ಸಂಭವಿಸಿಲ್ಲ.

ಸುಮಾರು 2 ಗಂಟೆಗೂ ಹೆಚ್ಚು ಕಾಲ ಹೊತ್ತಿ ಉರಿದ ಬೆಂಕಿ ಆಗಸದಲ್ಲಿ ದಟ್ಟ ಹೊಗೆ ಮೋಡಗಳನ್ನು ಮುಚ್ಚಿತ್ತು. ಬೆಂಕಿ ನಂದಿಸಲು ಸ್ಥಳಕ್ಕೆ ತುಮಕೂರು – ಶಿರಾ ನಗರದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !