ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ನೂತನ ಟಿ20 ಬೌಲರ್ಗಳ ಶ್ರೇಯಾಂಕ(ICC Rankings) ಪಟ್ಟಿ ಬಿಡುಗಡೆಗೊಳಿಸಿದ್ದು, ಅಫಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್(Rashid Khan) ನಂ.1 ಸ್ಥಾನ ಪಡೆದಿದ್ದಾರೆ.
ಶ್ರೀಲಂಕಾ ತಂಡದ ವನಿಂದು ಹಸರಂಗ(Wanindu Hasaranga) ಒಂದು ಸ್ಥಾನಗಳ ಕುಸಿತ ಕಂಡು ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ.
ಸದ್ಯ ಅವರು 710 ರೇಟಿಂಗ್ ಅಂಕ ಹೊಂದಿದ್ದಾರೆ. ಹಸರಂಗ (695), ಫಝಲ್ಹಕ್ ಫಾರೂಕಿ ಮೂರನೇ ಮತ್ತು ಜೋಶ್ ಹ್ಯಾಝಲ್ವುಡ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಆದರೆ ಭಾರತದ ಯಾವುದೇ ಬೌಲರ್ ಕೂಡ ಅಗ್ರ 10ರಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. 635 ಅಂಕ ಹೊಂದಿರುವ ಅರ್ಶ್ದೀಪ್ ಸಿಂಗ್ 14ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ಸೂರ್ಯಕುಮಾರ್ ಯಾದವ್(suryakumar yadav) ಮೊದಲ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಟಾಪ್-10 ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಟೀಮ್ ಇಂಡಿಯಾದ ಆಟಗಾರರು ಸ್ಥಾನ ಪಡೆದಿಲ್ಲ. ವಿರಾಟ್ ಕೊಹ್ಲಿ(Virat Kohli) 2 ಸ್ಥಾನ ಕುಸಿತ ಕಂಡು 16ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಕೆ ಎಲ್ ರಾಹುಲ್(KL Rahul) ಮೂರು ಸ್ಥಾನ ಕುಸಿತದೊಂದಿಗೆ 28ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ನಾಯಕ ರೋಹಿತ್ ಶರ್ಮಾ(Rohit Sharma) 31ನೇ ಸ್ಥಾನಕ್ಕೆ ಕುಸಿದಿದ್ದಾರೆ.