ಪ್ರಧಾನಿ ಮೋದಿ ಭೇಟಿಯಾದ ಆಸ್ಕರ್ ವಿಜೇತ “ದಿ ಎಲಿಫೆಂಟ್ ವಿಸ್ಪರರ್ಸ್” ತಂಡ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ ಮತ್ತು ಗುನೀತ್​ ಮೊಂಗಾ ನಿರ್ಮಾಣದ “ದಿ ಎಲಿಫೆಂಟ್ ವಿಸ್ಪರರ್ಸ್” ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಅವಾರ್ಡ್ ಹಾಗೂ ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಆಸ್ಕರ್ ಪಡೆದ ಭಾರತದ ಮೊದಲ ಸಾಕ್ಷ್ಯಚಿತ್ರ ಖ್ಯಾತಿಗೆ ಪಾತ್ರವಾದ “ದಿ ಎಲಿಫೆಂಟ್ ವಿಸ್ಪರರ್ಸ್” ತಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದೆ.

“ದಿ ಎಲಿಫೆಂಟ್ ವಿಸ್ಪರರ್ಸ್” ನಿರ್ಮಾಪಕಿ ಗುನೀತ್​ ಮೊಂಗಾ ಮತ್ತು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್

ದಿ ಎಲಿಫೆಂಟ್ ವಿಸ್ಪರರ್ಸ್ ಸಿನಿಮಾದ ತೇಜಸ್ಸು ಮತ್ತು ಯಶಸ್ಸು ಜಾಗತಿಕವಾಗಿ ಗಮನ ಸೆಳೆಯುವುದರ ಜೊತೆಗೆ ಮೆಚ್ಚುಗೆಯನ್ನೂ ಗಳಿಸಿದೆ. ಇಂದು, ಆ ಅದ್ಭುತ ತಂಡವನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಗುನೀತ್​ ಮೊಂಗಾ ಟ್ವೀಟ್

ಪ್ರಧಾನಿ ಅವರೇ, ಇಂದು ನಿಮ್ಮನ್ನು ಭೇಟಿಯಾದ ಕ್ಷಣ ಮತ್ತು ‘ದಿ ಎಲಿಫೆಂಟ್ ವಿಸ್ಪರರ್ಸ್’ಗಾಗಿ ಭಾರತ ಗೆದ್ದ ಆಸ್ಕರ್ ಅನ್ನು ನಿಮ್ಮೊಂದಿಗೆ ಹಂಚಿಕೊಂಡ ಕ್ಷಣ ನಮಗೆ ನಿಜವಾಗಿಯೂ ಗೌರವವಾಗಿದೆ. ನಿಮ್ಮ ಮೆಚ್ಚುಗೆಗೆ ಕೃತಜ್ಞರಾಗಿರುತ್ತೇನೆ ಎಂದು ನಿರ್ಮಾಪಕಿ ಗುನೀತ್​ ಮೊಂಗಾ ಟ್ವೀಟ್ ಮಾಡಿದ್ದಾರೆ.

ಕಾರ್ತಿಕಿ ಗೊನ್ಸಾಲ್ವೆಸ್ ಟ್ವೀಟ್

ಎಲಿಫೆಂಟ್ ವಿಸ್ಪರರ್ಸ್ ತಂಡ ನಮ್ಮ ಪ್ರಧಾನಿ ಅವರನ್ನು ಭೇಟಿ ಮಾಡಿದ್ದು, ಗೌರವದ ಕ್ಷಣವಾಗಿದೆ. ಭಾರತದ ಆಸ್ಕರ್​ ಗೆಲುವನ್ನು ಪ್ರಧಾನಿ ಅವರೊಂದಿಗೆ ಸಂಭ್ರಮಿಸಿ ನಾವು ಕೃತಜ್ಞರಾಗಿದ್ದೇವೆ ಎಂದು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!