ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಡಾ.ವಿಷ್ಣುವರ್ಧನ್ ಅಭಿಮಾನಿ ಪಾತ್ರದ ಕಥೆಯುಳ್ಳ “ವೀರಂ” ಚಲನಚಿತ್ರ, ಏಪ್ರಿಲ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ಪ್ರಜ್ವಲ್ ದೇವರಾಜ್ ಹಾಗೂ ಚಿತ್ರತಂಡ ಹೇಳಿದೆ.
ಗುರುವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾತನಾಡಿದ ವೀರಂ ಚಿತ್ರದ ನಾಯಕ ಪ್ರಜ್ವಲ್ ದೇವರಾಜ್, ಈ ಚಿತ್ರ ಏಪ್ರಿಲ್ 7 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಹೇಳಿದರು.
ವೀರಂ ಎಂದರೆ ಯಾರಿಗೂ ಹೆದರದ ವ್ಯಕ್ತಿಯಾಗಿದ್ದು, ಈ ಕಥೆಯಲ್ಲಿ ಎಮೋಷನ್ ಇದೆ. ಅಕ್ಕ -ತಮ್ಮಂದಿರ ಪ್ರೀತಿ ಕಾಳಜಿ, ಆಕಾಂಕ್ಷೆಗಳನ್ನು ತೋರುವ ಭಾವನಾತ್ಮಕ ಚಿತ್ರ ವೀರಂ, ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿ ವೀರಂ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು ಎಂದರು. ಪ್ರತಿಯೊಬ್ಬರಿಗೂ ಜೀವನದಲ್ಲಿ ಅವರದ್ದೇ ಅದ ವೈಯಕ್ತಿಕ ವಿಚಾರಗಳು ಇರುತ್ತವೆ. ಆ ಬಗ್ಗೆ ಕೇಳುವುದರಲ್ಲಿ ಸರಿ ಇರಬಹುದು ಅಥವಾ ತಪ್ಪಿರಬಹುದು ಎಂಬ ಕಥೆಯನ್ನು ಹೊಂದಿರುವ ವೀರಂ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನನಗೆ ಮಾಸ್ ಚಿತ್ರದ ಗ್ಯಾಪ್ ಇತ್ತು. ಆ ಪಾತ್ರ ವೀರಂ ಚಿತ್ರದಲ್ಲಿ ಸಿಕ್ಕಿದೆ ಎಂದು ಹೇಳಿಕೊಂಡರು.
ಮಾಸ್ ಅವತಾರದಲ್ಲಿ ಜನರ ಮುಂದೆ ಬರಲಿದ್ದೇನೆ. ಈ ಚಿತ್ರವನ್ನು ನಿರ್ಮಾಪಕರು ಹಾಗೂ ನಿರ್ದೇಶಕರು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದು, ಒಳ್ಳೆ ಕಥೆಯಿರುವ ಸಿನಿಮಾ ಇದಾಗಿದೆ. ಇದರಲ್ಲಿ ಒಳ್ಳೆಯ ಹಾಡುಗಳಿವೆ, ಸಿನೆಮಾ ಜೀವನದಲ್ಲಿ ಕಷ್ಟದ ಪರಿಸ್ಥಿತಿಯಲ್ಲಿ ಅದರಿಂದ ಹೇಗೆ ಹೊರಬರಬಹುದು ಎಂಬ ಸಾರಾಂಶ ಇದ್ದು, ನಾನು ವಿಷ್ಣು ಅಭಿಮಾನಿಯಾಗಿ ಈ ಸಿನಿಮಾದಲ್ಲಿ ಮಾಡಿದ್ದೇನೆ.
ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕೂಡ ಮಿಂಚಿದ್ದು ಮೂವಿ ಪಕ್ಕಾ ಮಾಸ್ ಆಗಿದ್ದು, ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಈ ಚಿತ್ರದಲ್ಲಿ ಶಿಷ್ಯ ದೀಪಕ್ ನೆಗೆಟಿವ್ ರೋಲ್ನಲ್ಲಿ ಅಭಿನಯಿಸಿದ್ದಾರೆ. ನಟಿ ಶೃತಿ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ಗೆ ಅಕ್ಕನಾಗಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ.