ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಕೆಲವು ಸಮಸ್ಯೆ ಕಾಡುತ್ತಿದ್ದರೂ ನಿಮ್ಮ ಉತ್ಸಾಹಶೀಲತೆ ಎಲ್ಲ ಚಿಂತೆಗಳನ್ನು ದೂರ ಮಾಡುವುದು. ಆಪ್ತರ ಸಂಗದಲ್ಲಿ ಸಂತೋಷ ಅನುಭವಿಸುವಿರಿ.
ವೃಷಭ
ಪ್ರಮುಖ ವಿಷಯದಲ್ಲಿ ನಿಮ್ಮ ನಿಲುವು ಬದಲಿಸುವ ಪ್ರಸಂಗ ನಡೆದೀತು. ಇತರರ ನಿಲುವು ಒಪ್ಪಿಕೊಳ್ಳಬೇಕಾದೀತು. ವಾಸ್ತವತೆ ಅರಿಯಿರಿ.
ಮಿಥುನ
ಮುಖ್ಯ ಕಾರ್ಯದಲ್ಲಿ ನೀವು ನಿರೀಕ್ಷಿಸಿದ ಯಶಸ್ಸು ಇಂದು ದೊರಕುವುದು. ಆದರೆ ಯಶಸ್ಸಿನಿಂದ ಮೈಮರೆಯದಿರಿ. ಕೆಲಸ ಇನ್ನೂ ಉಳಿದಿದೆ.
ಕಟಕ
ಆಪ್ತರೆನಿಸಿದವರ ಬಗ್ಗೆ ಶಂಕೆಗೊಳ್ಳುವ ಪ್ರಸಂಗ ಉದ್ಭವಿಸಬಹುದು. ಆದರೆ ಚಾಡಿ ಮಾತು ನಂಬದಿರಿ. ವಿವೇಕದಿಂದ ಪರಾಮರ್ಶಿಸಿ ನಿರ್ಧಾರ ತಾಳಿರಿ.
ಸಿಂಹ
ಯಾವುದೇ ಹಿನ್ನಡೆ ನಿಮ್ಮನ್ನಿಂದು ಬಾಧಿಸದು. ಹಾಗಾಗಿ ಆ ಕುರಿತಾದ ಅಂಜಿಕೆ ಬಿಟ್ಟುಬಿಡಿ. ಆದರೆ ದಿನವಿಡಿ ನಿಮ್ಮ ಪಾಲಿಗೆ ನೀರಸವೆನಿಸುತ್ತದೆ.
ಕನ್ಯಾ
ಸರಿಯಾದ ಯೋಜನೆ
ಯಿಲ್ಲದೆ ನಿಮ್ಮ ಕೆಲಸ ಕೆಡಬಹುದು. ಕೆಲಸದಲ್ಲಿನ ತಪ್ಪು ಸರಿಪಡಿಸುವುದರಲ್ಲೇ ನಿಮ್ಮ ಹಿತವಿದೆ. ಅದಕ್ಕೆ ಮುಜುಗರ ಬೇಡ.
ತುಲಾ
ಕೆಲವು ಬೆಳವಣಿಗೆ ನಿಮಗೆ ಹಿತ ತಾರದು. ಆದರೆ ಅದನ್ನು ಒಪ್ಪಿಕೊಂಡು ಸಾಗುವುದರಲ್ಲಿ ನಿಮ್ಮ ಹಿತವಿದೆ. ವಿನಾಕಾರಣ ಇತರರನ್ನು ಎದುರು ಹಾಕಿಕೊಳ್ಳದಿರಿ.
ವೃಶ್ಚಿಕ
ವೃತ್ತಿಯಲ್ಲಿ ಬಿಕ್ಕಟ್ಟು. ಹಣಕಾಸು ಕೊರತೆ. ಇತರರ ಸಹಕಾರದಿಂದ ಅದನ್ನು ನಿಭಾಯಿ ಸುವಿರಿ. ಖಾಸಗಿ ಬದುಕಿನಲ್ಲಿ ಏರುಪೇರು. ನಿರಾಶೆ ಸಂಭವ.
ಧನು
ಅಧಿಕ ಕೆಲಸ, ಅಧಿಕ ಒತ್ತಡ. ಎಲ್ಲ ಕಾರ್ಯವನ್ನು ಮುಗಿಸಲು ಯತ್ನಿಸುವಿರಿ ಅಂತಿಮವಾಗಿ ಯಾವುದೇ ಕೆಲಸ ಸರಿಯಾಗಿ ನಡೆಯದು.
ಮಕರ
ವ್ಯವಹಾರದಲ್ಲಿ ಶುಭ ಸುದ್ದಿ. ನೀವು ನಿರೀಕ್ಷಿಸಿದಂತೆ ಕೆಲಸ ಸಾಗುವುದು. ಆದರೆ ಕೌಟುಂಬಿಕವಾಗಿ ಒತ್ತಡ. ಅವರ ಕೆಲವು ಬೇಡಿಕೆ ಅತಿಯೆನಿಸುವುದು.
ಕುಂಭ
ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಆಸಕ್ತಿ. ಕೆಲವು ಸಮಸ್ಯೆಗಳು ನಿಮ್ಮನ್ನು ಆಧ್ಯಾತ್ಮಿಕದೆಡೆಗೆ ನೂಕಬಹುದು. ಕಷ್ಟಕ್ಕೆ ಅಂಜದಿರಿ, ಅದನ್ನು ಎದುರಿಸಿ.
ಮೀನ
ನಿಮ್ಮ ಜನಪ್ರಿಯತೆ ಹೆಚ್ಚಿಸುವ ಬೆಳವಣಿಗೆ. ಕುಟುಂಬದಲ್ಲಿ ಭಿನ್ನಮತ ಮೂಡಿದರೂ ಶೀಘ್ರ ನಿವಾರಣೆ. ಆರ್ಥಿಕ ಸ್ಥಿತಿ ಸುಧಾರಣೆ.