ಹೊಸದಿಗಂತ ವರದಿ ಕಲಬುರಗಿ :
ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಚೆಕ್ ಪೋಸ್ಟ್ ಬಳಿ 4.50 ಲಕ್ಷ ರೂಪಾಯಿ ನಗದು ಹಣ ಜಪ್ತಿ ಮಾಡಿಕೊಳ್ಳಲಾಗಿದೆ.
ಮೆಹಬೂಬ್ ಸಾಬ್ ಎಂಬುವವರು ದಾಖಲೆಯಿಲ್ಲದ 4.50 ಲಕ್ಷ ರೂಪಾಯಿ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಜೇರಟಗಿ ಚೆಕ್ ಪೋಸ್ಟ್ ನಲ್ಲಿ ಪೋಲಿಸರು ತಪಾಸಣೆ ಕೈಗೊಂಡಾಗ ಹಣ ಪತ್ತೆಯಾಗಿದೆ.
ವಾಹನ ಸಂಖ್ಯೆ ಕೆಎ-32 ಪಿ-7248 ಬುಲೇರೋ ವಾಹನದಲ್ಲಿ ಸಾಗಿಸುತ್ತಿದ್ದ ಹಣ ಸೂಕ್ತ ದಾಖಲೆಗಳಿಲ್ಲದೇ ಇರುವ ಕಾರಣ ಹಣವನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.