IPL-2023 | ರಾಜಸ್ಥಾನ ವಿರುದ್ಧ ಟಾಸ್ ಗೆದ್ದ ಸನ್‌ರೈಸರ್ಸ್‌ ಬೌಲಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಐಪಿಎಲ್ 4ನೇ ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.

ಸನ್‌ರೈಸರ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯಕ್ಕೆ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಏಯ್ಡನ್ ಮಾರ್ಕ್‌ರಮ್ ಬದಲಿಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಭುವನೇಶ್ವರ್ ಕುಮಾರ್ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ರಾಜಸ್ಥಾನ ರಾಯಲ್ಸ್‌ ತಂಡದ ಪರ ಕೆ ಎಂ ಆಸಿಫ್ ಹಾಗೂ ಜೇಸನ್ ಹೋಲ್ಡರ್‌ ಪಾದಾರ್ಪಣೆ ಮಾಡಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ವಿದೇಶಿ ಆಟಗಾರರ ರೂಪದಲ್ಲಿ ಫಜಲ್‌ಹಕ್ ಫಾರೂಕಿ, ಹ್ಯಾರಿ ಬ್ರೂಕ್, ಆದಿಲ್ ರಶೀದ್ ಹಾಗೂ ಗ್ಲೆನ್ ಫಿಲಿಫ್ಸ್ ಸ್ಥಾನ ಪಡೆದಿದ್ದಾರೆ, ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್‌ ತಂಡದ ಪರ ಜೋಸ್ ಬಟ್ಲರ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಶಿಮ್ರೋನ್ ಹೆಟ್ಮೇಯರ್ ಸ್ಥಾನ ಪಡೆದಿದ್ದಾರೆ.

ರಾಜ​ಸ್ಥಾ​ನ ರಾಯಲ್ಸ್: ಯಶಸ್ವಿ ಜೈಸ್ವಾಲ್‌, ಜೋಸ್ ಬಟ್ಲರ್‌, ಸಂಜು ಸ್ಯಾಮ್ಸನ್‌ ​(​ನಾ​ಯ​ಕ), ದೇವ​ದ​ತ್‌ ಪಡಿಕ್ಕಲ್, ಶಿಮ್ರಾನ್ ಹೆಟ್ಮೇ​ಯರ್‌, ರಿಯಾನ್‌ ಪರಾಗ್, ಜೇಸನ್ ಹೋಲ್ಡರ್‌, ರವಿಚಂದ್ರನ್ ಅಶ್ವಿನ್‌, ಟ್ರೆಂಟ್ ಬೌಲ್ಟ್‌, ಕೆ ಎಂ ಆಸಿಫ್, ಯುಜುವೇಂದ್ರ ಚಹ​ಲ್‌

ಸನ್‌ರೈಸರ್ಸ್‌ ಹೈದ್ರಾ​ಬಾ​ದ್‌: ಮಯಾಂಕ್‌ ಅಗರ್‌ವಾಲ್‌, ಅಭಿಷೇಕ್‌ ಸಿಂಗ್, ಹ್ಯಾರಿ ಬ್ರೂಕ್‌, ರಾಹುಲ್ ತ್ರಿಪಾಠಿ, ವಾಷಿಂಗ್ಟನ್‌ ಸುಂದರ್, ಗ್ಲೆನ್‌ ಫಿಲಿಫ್ಸ್‌, ಟಿ ನಟರಾಜನ್‌, ಫಜಲ್‌ಹಕ್ ಫಾರೂಕಿ, ಆದಿಲ್ ರಶೀದ್ ಭುವನೇಶ್ವರ್‌ ಕುಮಾರ್(ನಾಯಕ), ಉಮ್ರಾನ್‌ ಮಲಿಕ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!