ಹೊಸದಿಗಂತ ಡಿಜಿಟಲ್ ಡೆಸ್ಕ್ :
ಐಪಿಎಲ್ ಆರಂಭವಾಗಿದ್ದು, ಎಲ್ಲೆಡೆ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ದಿನವಿಡೀ ಸರದಿ ಸಾಲಲ್ಲಿ ನಿಂತು ಟಿಕೆಟ್ ಖರೀದಿಸಿ ಅಭಿಮಾನಿಗಳು ಪಂದ್ಯ ನೋಡಲು ಹೋಗುತ್ತಿದ್ದಾರೆ.
ಈ ರೀತಿಪಂದ್ಯದ ದಿನ ಕ್ರೀಡಾಂಗಣ ಪ್ರವೇಶಿಸುವ ಅಭಿಮಾನಿಗಳು ಕೆಲ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಕ್ರೀಡಾಂಗಣದೊಳಕ್ಕೆ ಬಿಸಿಸಿಐ ನಿಷೇಧಿತ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ.
ಇದೀಗ ಈ ಪಟ್ಟಿಗೆ ಮತ್ತೊಂದು ಸೇರಿಕೊಂಡಿದೆ. ಸಿಎಎ ಹಾಗೂ ಎನ್‌ಆರ್‌ಸಿಸಿ ಕಾಯ್ದೆ ವಿರೋಧಿಸುವ ಪ್ರತಿಭಟನಾ ಬ್ಯಾನರ್ ಕ್ರೀಡಾಂಗಣದೊಳಕ್ಕೆ ಕೊಂಡೊಯ್ಯುವಂತಿಲ್ಲ. ಈ ಕುರಿತು ಪೇಟಿಎಂ ಇನ್‌ಸೈಡರ್ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ದೆಹಲಿ, ಮೊಹಾಲಿ, ಹೈದರಾಬಾದ್ ಹಾಗೂ ಅಹಮ್ಮದಾಬಾದ್ ಕ್ರೀಡಾಂಗಣದಲ್ಲಿನ ಪಂದ್ಯದ ವೇಳೆ ಯಾವುದೇ ಪ್ರತಿಭಟಟನಾ ಬ್ಯಾನರ್ ಕ್ರೀಡಾಂಗಣದೊಳಕ್ಕೆ ಕೊಂಡೊಯ್ಯಲು ಅವಕಾಶವಿಲ್ಲ. ಇನ್ನು ಕ್ರೀಡಾಂಗಣದೊಳಗೆ ಪೈಂಟ್ ಅಥವಾ ಇನ್ಯಾವುದರಿಂದ ಪ್ರತಿಭಟನಾ ಬ್ಯಾನರ್ ರಚಿಸಿ ಪ್ರದರ್ಶಿಸುವುದು ಕಾನೂನು ಉಲ್ಲಂಘನೆಯಾಗಿದೆ . ಈ ರೀತಿಯ ಯಾವುದೇ ಪ್ರತಿಭಟನಾ ಬ್ಯಾನರ್‌ಗೆ ಅವಕಾಶವಿಲ್ಲ. ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್, ಲಖನೌ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ತಂಡಕ್ಕೆ ಪೇಟಿಂ ಇನ್‌ಸೈಡರ್ ಅಧಿಕೃತ ಟಿಕೆಟ್ ಪಾರ್ಟ್ನರ್ ಆಗಿದೆ.
ಕೇವಲ ಪ್ರತಿಭಟನಾ ಬ್ಯಾನರ್ ಮಾತ್ರವಲ್ಲ, ಪ್ರೇಕ್ಷರಾಗಿ ಪಂದ್ಯ ನೋಡಲು ತೆರಳುವ ಅಭಿಮಾನಿಗಳು, ಕ್ಯಾಮರಾ, ಇತರ ರೆಕಾರ್ಡಿಂಗ್ ವಸ್ತುಗಳು, ಲ್ಯಾಪ್‌ಟಾಪ್, ಪವರ್ ಬ್ಯಾಂಕ್, ಬೈನಾಕುಲರ್, ಲೈಟರ್ಸ್, ಮ್ಯಾಚ್‌ಬಾಕ್ಸ್, ಸಿಗರೇಟು, ಸಾಕು ಪ್ರಾಣಿ, ಪಟಾಕಿ, ಸೆಲ್ಫಿ ಸ್ಟಿಕ್, ಸಿಗರೇಟು, ಚಾಕು ಸೇರಿದಂತೆ ಯಾವುದೇ ಶಸ್ತ್ರಾಸ್ತ್ರ, ಮದ್ಯ, ಡ್ರಗ್ಸ್ ಸೇರಿದಂತೆ ಕೆಲ ವಸ್ತುಗಳನ್ನು ಕ್ರೀಡಾಂಗಣದೊಳಕ್ಕೆ ಕೊಂಡಯ್ಯಲು ಅವಕಾಶವಿಲ್ಲ.