ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪಶ್ಚಿಮ ಬಂಗಾಳದಲ್ಲಿ ರಾಮ ನವಮಿ ಆಚರಣೆ ವೇಳೆ ನಡೆದ ಕಲ್ಲು ತೂರಾಟ, ಹಲ್ಲೆ, ಹಿಂಸಾಚಾರ ಹಿಂಸಾಚಾರ ಭುಗಿಲೆದ್ದಿದ್ದು, ಇದೀಗ ಮತ್ತೆ ಬಿಜೆಪಿ ಕಾರ್ಯಕರ್ತರ ಶೋಭ ಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಈ ಶೋಭಯಾತ್ರೆಯಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಪಾಲ್ಗೊಂಡಿದ್ದರು. ಶಾಂತಿಯುತವಾಗಿ ಸಾಗುತ್ತಿದ್ದ ಶೋಭ ಯಾತ್ರೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇಟ್ಟಿಗೆಗಳನ್ನು ತೂರಿದ್ದಾರೆ.
ಬಿಜೆಪಿ, ವಿಶ್ವಹಿಂದೂ ಪರಿಷತ್ ಹಾಗೂ ಇತರ ಹಿಂದೂ ಸಂಘಟನೆಗಳು ರಾಮ ನವಮಿ ಶೋಭಯಾತ್ರೆ ಆಯೋಜಿಸಿತ್ತು. ಹೂಗ್ಲಿಯಲ್ಲಿ ಆಯೋಜಿಸಿದ ಈ ಯಾತ್ರೆಗೆ ಸುಗಮವಾಗಿ ಸಾಗಿಲ್ಲ. ಹಿಂಸಾಚಾರ, ಹಲ್ಲೆ ನಡೆದಿದೆ. ಈ ದಾಳಿಯಲ್ಲಿ ಬಿಜೆಪಿ ಶಾಸಕ ಬಿಮನ್ ಘೋಷ್ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಶ್ಚಿಮ ಬಂಗಾಳದ ಹೌರ ಜಿಲ್ಲೆಯಲ್ಲಿ ಹಿಂಸಾಚಾರ ನಡೆದ ಪರಿಸ್ಥಿತಿ ಶಾಂತವಾಗುತ್ತಿದ್ದಂತೆ ಇದೀಗ ಹೂಗ್ಲಿಯಲ್ಲಿ ಮತ್ತೆ ಗಲಭೆ ಶುರುವಾಗಿದೆ. ರಾಮನವಮಿ ಮೆರವಣಿಗೆ ವೇಳೆ ಪಶ್ಚಿಮ ಬಂಗಾಳದ ಹೌರಾದಲ್ಲಿ ಗುರುವಾರ ಆರಂಭವಾಗಿದ್ದ ಹಿಂಸಾಚಾರ ಶುಕ್ರವಾರವೂ ಮುಂದುವರೆದಿತ್ತು.